ಪ್ರದೀಪ್ ಈಶ್ವರ್’ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ: ಡಾ.ಕೆ ಸುಧಾಕರ್

Share to all

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದು ಕೊರತೆಗಳನ್ನ ಆಲಿಸಿ ಮಾತನಾಡಿದ ಸಂಸದ ಸುಧಾಕರ್. ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ. ಬುಧವಾರ ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಂತೆ, ಸೋಮವಾರ ಪೆರೇಸಂದ್ರದಲ್ಲಿ ಸಂತೆ. ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.

ಅಂದಹಾಗೆ ಚಿಕ್ಕಬಳ್ಳಾಪುರದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿದ್ದಾರೆ. ಕ್ರಷರ್ ಟಿಪ್ಪರ್ ಗಳಿಗೆ ಕಡಿವಾಣ ಹಾಕಲು ಸಾಧ್ಯ ಆಗ್ತಿಲ್ಲವಂತೆ ಹಾಗಾಗಿ ಕೈಗೆ ಬಳೆ ತೊಟ್ಟುಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.

ಜಾತಿ ಜನಗಣತಿ ಬಿಡುಗಡೆ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಇತಿಹಾಸದಲ್ಲಿ ಖಳ ನಾಯಕ ಆಗ್ತಾರೆ. ಯಾರೊ ರಾಜಕೀಯ ನಾಯಕರ ಆಣತಿಯಂತೆ ಜಾತಿ ಲೆಕ್ಕಾಚಾರ ಬರೆಸಲಾಗಿದೆ. ರಾಜ್ಯದಲ್ಲಿ ಯಾರ ಮನೆಗೆ ಹೋಗಿ ಸರ್ವೆ ಮಾಡಲಾಗಿದೆ ಹೇಳಿ? ನನ್ನ ಮನೆಗೆ ಬಂದು ಗಣತಿ ಮಾಡಿಲ್ಲ. ಕೆಳಜಾತಿ ಮೇಲ್ಜಾತಿ ಮಧ್ಯೆ ಘರ್ಷಣೆ ಮಾಡಿಸುವ ಹುನ್ನಾರದಿಂದ ಜಾತಿ ಜನಗಣತಿ ಬಿಡುಗಡೆ ಮಾಡ್ತಿದ್ದಾರೆ. ಕಾಂಗ್ರೆಸ್‌ನ ಮೂವರು ಮಂತ್ರಿಗಳು ಸಹ ಜಾತಿ ಜನಗಣತಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೆಹಲಿಯ ಕಾಂಗ್ರೆಸ್‌ನಲ್ಲೂ ಒಮ್ಮತವಿಲ್ಲ. ಮತ್ತೆ ಹೇಗೆ? ಜಾತಿ ಜನಗಣತಿ ವರದಿ ಬಿಡುಗಡೆ ಮಾಡ್ತಾರೆ ಎಂದು ಪ್ರಶ್ನೆ ಮಾಡಿದರು.


Share to all

You May Also Like

More From Author