ಸಾಯಿ ವೆಂಕಟೇಶ್ವರ ಮಿನರಲ್ ಗುತ್ತಿಗೆ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಕಾದಿದ್ಯಾ ಸಂಕಷ್ಟ!?

Share to all

ಬೆಂಗಳೂರು:- 2007ರಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್‌ಗೆ ಗಣಿಗಾರಿಕೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಕಾದಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಪ್ರಕರಣ ಅಕ್ಷರಶಃ ಎಚ್.ಡಿ.ಕುಮಾರಸ್ವಾಮಿ ಕೊರಳಿಗೆ ಉರುಳು ಬಿಗಿಯಾಗಿ ಸುತ್ತಿಕೊಳ್ಳೋದು ಕನ್ಫರ್ಮ್ ಎನ್ನಲಾಗುತ್ತಿದೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ SIT ತಂಡ ತನಿಖೆ ನಡೆಸುತ್ತಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಕೋರ್ಟ್ ಮೂಲಕ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ.

ಇದೀಗ ಪ್ರಕರಣ ತನಿಖೆ‌ ನಡೆಸಿ ಪ್ರಾಸಿಕ್ಯೂಶನ್ ಗೆ SIT ಅನುಮತಿ ಕೇಳಿದೆ. ಪ್ರಾಸಿಕ್ಯೂಶನ್ ಅನುಮತಿಗು ಮೊದಲು ಪ್ರಕರಣ ಸಂಬಂಧ ಸಕಾರಣ ಮತ್ತು ವರದಿ ತರ್ಜುಮೆ ಮಾಡಿ ಕಳಿಸುವಂತೆ ರಾಜಭವನದಿಂದ ಪತ್ರ ಬರೆಯಲಾಗಿತ್ತು.

ಇದೀಗ ರಾಜಭವನದಿಂದ‌ ಪತ್ರದಂಗೆ SIT ಉತ್ತರ ನೀಡಿದೆ. ಈ ಸಂಬಂಧ ಎಸ್ ಐ ಟಿ ಮುಖ್ಯಸ್ಥ ವಿರುದ್ದ ಕುಮಾರಸ್ವಾಮಿ ಪತ್ರಿಕಾಗೊಷ್ಠಿ ನಡೆಸಿದ್ದರು. ವೈಯಕ್ತಿಕವಾಗಿ ಟೀಕೆ ಮತ್ತು ಪರೋಕ್ಷವಾಗಿ ಬೆದರಿಕೆ ಹಾಕಿದ್ದ ಆರೋಪ ಮಾಡಿದರು.

ಆರೋಪದ ಸಂಬಂಧ ದೂರು ನೀಡಿದ ಹಿನ್ನೆಲೆ ಕುಮಾರಸ್ವಾಮಿ ವಿರುದ್ದ ಎನ್ ಸಿ ಆರ್ ದಾಖಲಾಗಿದೆ. ಇದೀಗ ಮುಂದುವರೆದ ಭಾಗವಾಗಿ ಕುಮಾರಸ್ವಾಮಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ.

ಕುಮಾರಸ್ವಾಮಿ ಪಡೆದ ಜಾಮೀನು ರದ್ದಿಗೆ ಎಸ್ ಐ ಟಿ ಕೋರ್ಟ್ ಮೊರೆ ಹೋಗಿದೆ. ಪ್ರಕರಣ ಸಂಬಂಧ ಸೂಕ್ತ ಸಾಕ್ಷಿ ಮತ್ತು ಪರೋಕ್ಷ ಬೆದರಿಕೆ ಕಾರಣ ನೀಡಿ ಕೋರ್ಟ್ ಮೊರೆ ಹೋಗಿದರು. ಕೇಂದ್ರ ಸಚಿವ ಕುಮಾರಸ್ವಾಮಿ ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್ ಗೆ SIT ಮನವಿ ಮಾಡಿದೆ. ಒಂದು ವೇಳೆ ಕೋರ್ಟ್ ಜಾಮೀನು ರದ್ದು ಗೊಳಿಸಿದ್ರೆ ಕುಮಾರಸ್ವಾಮಿ ಗೆ ಸಂಕಷ್ಟ ಪಕ್ಕ ಎನ್ನಲಾಗಿದೆ.


Share to all

You May Also Like

More From Author