ಕೇಂದ್ರ ಸರ್ಕಾರದ ಅಧೀನದ ಹೆಚ್‌ಎಂಟಿ ಭೂಮಿ ವಶ: ಸರ್ಕಾರಕ್ಕೆ ಮರ್ಯಾದೆ ಇಲ್ಲಾ ಎಂದು HDK ಕಿಡಿ!

Share to all

ಬೆಂಗಳೂರು:- ಹೆಚ್​ಎಂಟಿಯಿಂದ ಭೂಮಿ ವಶಕ್ಕೆ ಪಡೆದಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಹೇಳುವುದು ಇಷ್ಟೇ, ಕೋಲಾರದಲ್ಲಿ ಸಸಿ ನೆಡುವುದಕ್ಕೆ ಹೋಗಿದ್ದಾರೆ. ಮೊದಲು ಶ್ರೀನಿವಾಸಪುರದಲ್ಲಿ ಒಬ್ಬ ಮಾಜಿ ಸ್ವೀಕರ್ ಸುಮಾರು ನೂರಾರು ಎಕರೆ ಅರಣ್ಯ ಭೂಮಿಯನ್ನು ಲೂಟಿ ಹೊಡೆದಿದ್ದಾರೆ. ಅದನ್ನು ಮೊದಲು ಮರುವಶಪಡಿಸಿಕೊಳ್ಳಲಿ ಎಂದರು.

ತೀರ್ಪು ಬಂದಿರುವುದನ್ನೆಲ್ಲ ಕುರ್ಚಿ ಕೆಳಗೆ ಇಟ್ಟುಕೊಂಡು ಕುಳಿತಿದ್ದಾರೆ. ಮೊದಲು ಅದನ್ನು ನೋಡಲು‌ ಹೇಳಿ. ಎಷ್ಟು ಏಕರೆ ಲೂಟಿಯಾಗಿದೆ ಅಲ್ಲಿ? ಅದರ ಬಗ್ಗೆ ಚರ್ಚೆ ಮಾಡಿದ್ದೀರಾ? ಇಲ್ಲಿ ಕೋರ್ಟ್ ಇದೆ. ಅಲ್ಲಿ ಪೋಲೀಸ್, ಅರಣ್ಯ ಇಲಾಖೆಯವರು ಬಲವಂತವಾಗಿ ಹೋಗಿ ಬೇಲಿ ಹಾಕಿರಬಹುದು. ಅಂತಿಮವಾಗಿ ನ್ಯಾಯಾಲಯದ ತೀರ್ಪುಗಳಿಗೆ ತಲೆಬಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಕೇತಗಾನಹಳ್ಳಿ ಭೂ ಒತ್ತುವರಿ ವಿವಾದ ವಿಚಾರವಾಗಿ ಸರ್ಕಾರ ತನಿಖೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಕಳೆದ ನಲವತ್ತು ವರ್ಷಗಳಿಂದ ‌ನಡೆಯುತ್ತಿದೆ. ಹಲವು ಹೈಕೋರ್ಟ್ ಆದೇಶಗಳ ಮೇರೆಗೆ ದಾಖಲೆ ನೋಡಿ, ಸರ್ವೆ ಮಾಡಿ ಸುಸ್ತಾಗಿದ್ದಾರೆ. ಕೇತಗಾನಹಳ್ಳಿಯಲ್ಲಿ ಯಾವುದೇ ಒತ್ತುವರಿ ಮಾಡಿದ್ದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ, ನಮ್ಮ ಆಕ್ಷೇಪ ಏನಿಲ್ಲ. ಅಲ್ಲಿ 1980 ರಲ್ಲಿ ಪ್ರಾರಂಭವಾಗಿರುವುದು ಇನ್ನೂ ನಿಂತಿಲ್ಲ. ಸರ್ಕಾರಕ್ಕೆ ‌ಮರ್ಯಾದೆ ಬೇಡವಾ? ಇದು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಆಸ್ತಿ. ಇನ್ನೊಬ್ಬರ ಥರ ಕಳ್ಳ ಬೇಲಿ ಹಾಕಿಕೊಂಡು ಪಡೆದಿರುವುದಲ್ಲ. ಸರ್ಕಾರ ಯಾವ ತರಹ ಬೇಕಾದರೂ ತನಿಖೆ ಮಾಡಿಕೊಳ್ಳಲಿ, ನಾನು ಸಿದ್ಧವಾಗಿ ಇದ್ದೇನೆ ಎಂದರು.


Share to all

You May Also Like

More From Author