ಗಂಡನ ಗೆಲುವಿಗೆ ಹೆಂಡತಿ ಸಾಥ್: ನಿಖಿಲ್‌ ಪರ ಮತಬೇಟೆಗಿಳಿದ ಪತ್ನಿ ರೇವತಿ!

Share to all

ರಾಮನಗರ:– ಕರ್ನಾಟಕದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಅದರಂತೆ ಚನ್ನಪಟ್ಟಣದಲ್ಲಿ ಉಭಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನೂ ಚನ್ನಪಟ್ಟಣದಲ್ಲಿ ಪತ್ನಿ ರೇವತಿ ಕೂಡ ನಿಖಿಲ್‌ ಪರವಾಗಿ ಮತಬೇಟೆಗಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಬೆಳ್ಳಂ ಬೆಳಗ್ಗೆಯಿಂದಲೇ ಪತ್ನಿ ರೇವತಿ ಪ್ರಚಾರ ಶುರು ಮಾಡಿದ್ದಾರೆ. ಚನ್ನಪಟ್ಟಣದ ಮಹಿಳಾ ಕಾಲೇಜು ಮುಂಭಾಗ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ ನಿಖಿಲ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಿಖಿಲ್‌ ಪತ್ನಿ ರೇವತಿ ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರು ಸಾಥ್‌ ನೀಡಿದ್ದಾರೆ.

ಇನ್ನೂ ಪ್ರಚಾರದ ವೇಳೆ ಮಾತನಾಡಿರುವ ನಿಖಿಲ್‌, ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತೆ. ದೇವೇಗೌಡರು ಕಳೆದ 30 ವರ್ಷಗಳಿಂದ ಹಿಂದೆ ನಿರ್ಣಯ ಮಾಡಿ ಇಗ್ಗಲೂರು ಡ್ಯಾಂ ಮಾಡಿದ್ರು. ಕೆಲವರು 17ಕೆರೆ ತುಂಬಿಸಿದ್ದೇವೆ ಅಂತ ಪ್ರಚಾರ ತೆಗೆದುಕೊಳ್ತಾರೆ. ಆದರೆ ಸದಾನಂದಗೌಡರವರ ಕಾಲದಲ್ಲಿ ಆ ಕೆರೆಗಳನ್ನ ತುಂಬಿಸಿದ್ದು. ವಿ. ಸೋಮಣ್ಣ ಅವರು ಅನುದಾನ ಕೊಟ್ಟು ಕೆರೆಗಳಿಗೆ ಮರುಜೀವ ನೀಡಿದ್ರು. ಕುಮಾರಸ್ವಾಮಿಯವರೂ ಸುಮಾರು 100ಕ್ಕೂ ಹೆಚ್ಚು ಕೆರೆಗಳನ್ನ ತುಂಬಿಸಿದ್ದಾರೆ ಎಂದು ಹೆಚ್‌ಡಿಕೆ ಸಾಧನೆಯನ್ನ ಬಣ್ಣಿಸಿದ್ರು.

ಈ ಹಿಂದೆ ಕುಮಾರಸ್ವಾಮಿ ಅವರು ಸಾರಾಯಿ, ಲಾಟರಿ ನಿಷೇಧ ಮಾಡಿದ್ರು. ಇತ್ತೀಚಿನ ಆನ್ಲೈನ್ ಗೇಮಗಳಿಗೆ ಯುವಕರು ಬಲಿ ಆಗ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಂದ್ರೆ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಚನ್ನಪಟ್ಟಣ ತಾಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದನೆ ಆಗುತ್ತೆ. ಸರ್ಕಾರ ರೈತರಿಗೆ ಸರಿಯಾದ ಬೆಂಬಲ ಬೆಲೆ ಕೊಡ್ತಿಲ್ಲ. ಹಾಗಾಗಿ ಈ ಬಾರಿ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.


Share to all

You May Also Like

More From Author