ಕಚೇರಿಯಲ್ಲೇ ನೇಣಿಗೆ ಶರಣಾದ ಸರ್ಕಾರಿ ನೌಕರ: ಡೆತ್ ನೋಟ್ ನಲ್ಲಿ ಸ್ಪೋಟಕ ಮಾಹಿತಿ ಲಭ್ಯ!

Share to all

ಬೆಳಗಾವಿ:- ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಸರ್ಕಾರಿ ನೌಕರ ನೇಣಿಗೆ ಶರಣಾದ ಘಟನೆ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಜರುಗಿದೆ. ರುದ್ರಣ್ಣ ಯಡವಣ್ಣ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಸಾವಿಗೀಡಾಗ ರುದ್ರಣ್ಣ ಯಡವಣ್ಣನವರು ತಹಶೀಲ್ದಾರ್ ಬಸವರಾಜ ನಾಗರಾಳ ಕಚೇರಿಯಲ್ಲಿ SDA ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನೇರವಾಗಿ ಬರೆಯುವ ಮೂಲಕ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ.

ರುದ್ರಣ್ಣ ಸಾವಿಗೂ ಮುನ್ನ ವಾಟ್ಸ್​ಆ್ಯಪ್​ನಲ್ಲಿ ಸಚಿವೆಯೊಬ್ಬರ ಪಿಎ ಮತ್ತು ತಹಶೀಲ್ದಾರ್​ ಹೆಸರು ಉಲ್ಲೇಖಿಸಿದ್ದಾರೆ. ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ ನಾಗರಾಳ ಮತ್ತು ಸಚಿವೆಯೊಬ್ಬರ ಪಿಎ ಸೋಮು ಕಾರಣ ಅಂತಾ ಬರೆದು ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು ನೌಕರ ಬರೆದಿಟ್ಟಿದ್ದ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂದಿದ್ದಾರೆ. ಘಟನಾ ಸ್ಥಳಕ್ಕೆ ತಹಶಿಲ್ದಾರ್, ಖಡೇಬಜಾರ್ ಪೊಲೀಸರ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share to all

You May Also Like

More From Author