ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮಗು ಸಿಂಕ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದೆ. ಹೌದು ಅರ್ಚನ ಮತ್ತು ಮನು ಅಂತ ಪ್ರೀತಿಸಿ ಮದುವೆಯಾಗಿದ್ದರು ಇತ್ತೀಚಿಗಷ್ಟೇ ಮಗು ಸಹ ಆಗಿತ್ತು ನೆನ್ನೆ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸಿ ತಾಯಿ ಶೌಚಾಲಯಕ್ಕೆ ಹೋಗಿದ್ರಂತೆ ಆದರೆ ಈಗ ಮಗು ಸಿಂಕ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದೆ
ಇನ್ನು ಮಗು ತಂದೆ ಮನು ನೆನ್ನೆ ಸಂಜೆ ಮಗುವನ್ನ ಆಟ ಆಡಿಸಿಕೊಂಡು ಬಂದಿದ್ನಂತೆ, ಮನೆಗೆ ಬಂದು ಕೆಲಸಕ್ಕೆ ಹೋಗಿದ್ರಂತೆ, ಮನೆಯಲ್ಲಿ ತಾಯಿ ಅಜ್ಜಿ ಆದರೆ ಮಗು ಸಿನ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದೆ ಇನ್ನು ಅರ್ಚನಾ ತಂದೆ ಮಗು ಕಾಣೆಯಾಗಿರುವ ಬಗ್ಗೆ ಮಗಳು ಕರೆ ಮಾಡಿ ತಿಳಿಸಿದ್ರು ಹಾಗಾಗಿ ಮನೆಗೆ ಹೋಗಿ ಹುಡುಕಾಟ ನಡೆಸಿದೆ.
ಅದಾದ ಬಳಿಕ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಸಹ ನೀಡಿದ್ದೆ ಬಳಿಕ ಪೊಲೀಸರು ಟ್ಯಾಂಕ್ ಬಳಿ ಪರಿಶೀಲನೆ ಮಾಡಿ ಅಂತ ಹೇಳಿದಾಗ ಟ್ಯಾಂಕ್ ನಲ್ಲಿ ಮಗು ಪತಿಯಾಗಿದೆ ಹೀಗಾಗಿ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಪೊಲೀಸರು ಇನ್ಸ್ಪೆಕ್ಟರ್ ಮಹಾಜನ್ ನೇತೃತ್ವದಲ್ಲಿ ತಂಡ ತನಿಖೆ ನಡೆಸುತ್ತಿದೆ ಪೋಷಕರನ್ನು ಕರೆದು ಇದು ಮರಣೋತ್ತರ ಪರೀಕ್ಷೆಗೆ ಹಾಜರುಪಡಿಸಿದ್ದಾರೆ
ಒಟ್ನಲ್ಲಿ ತೊಟ್ಟಿಲಿನಲ್ಲಿದ್ದ ಮಗು ಹೇಗೆ ಸಿಂಗಕ್ ಟ್ಯಾಂಕ್ ನಲ್ಲಿ ಪತ್ತೆಯಾಯಿತು ಅನ್ನೋದು ಗೊತ್ತಿಲ್ಲ ಇದ್ದಿದ್ದೆ ಮೂರು ಜನ ಮನೆಯಲ್ಲಿ ಇದರಿಂದ ಸಾಕಷ್ಟು ಅನುಮಾನ ಮೂಡುತ್ತಿದೆ ಪ್ರೀತಿಸಿ ಕರಾಣಕ್ಕೆ ಮನೆ ವಿರೋಧದ ನಡುವೆ ಮದುವೆಯಾಗಿ ಒಂದು ಮೂರು ವರ್ಷದ ಹಿಂದೆ ಮನೆಯರನ್ನ ಒಪ್ಪಿಸಿ ಮದುವೆಯಾಗಿದ್ದರು ಆದರೆ ಈಗ ಮಗು ಅನುಮಾನ್ಪದ ರೀತಿಯಲ್ಲಿ ಸಾವನ್ನಪ್ಪಿರೋದು ಸಾಕಷ್ಟು ಅನುಮಾನ ಮೂಡಿದೆ ಪೊಲೀಸರು ತನಿಖೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ ತನಿಖೆಯ ನಂತರ ಸತ್ಯ ಸತ್ಯತೆ ತಿಳಿದುಬರಲಿದೆ..