ಸಚಿವ ತಿಮ್ಮಾಪುರಗೆ ಮದ್ಯದಂಗಡಿಗಳಿಂದ ವಾರಕ್ಕೆ 18 ಕೋಟಿ ಹಫ್ತಾ ಹೋಗುತ್ತೆ: ಆರ್ ಅಶೋಕ್ ಆರೋಪ

Share to all

ಬೆಂಗಳೂರು: 40 ವರ್ಷದ ರಾಜಕಾರಣ ತೆರೆದ ಪುಸ್ತಕ ಅಂತ ಸಿಎಂ ಹೇಳುತ್ತಾರೆ. ಆದರೆ ಪುಸ್ತಕ ತೆರೆದ್ರೆ ಬರೀ ಕಪ್ಪು ಚುಕ್ಕೆ ಇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಪೊಲೀಸರ ಮುಂದೆ ಕೈ ಕಟ್ಟಿ ಕುಳಿತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗಬೇಕು. ಲೋಕಾಯುಕ್ತ ವಿಚಾರಣೆ ಎಲ್ಲ ಮ್ಯಾಚ್ ಫಿಕ್ಸಿಂಗ್​ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ನಮಗೆ ನಾಚಿಕೆ ಆಗುತ್ತಿದೆ. 16 ತಿಂಗಳ ಕಾಂಗ್ರೆಸ್‌ನ ಸರ್ಕಾರದಲ್ಲಿ ನಿತ್ಯ ಒಬ್ಬರಲ್ಲ, ಒಬ್ಬರು ಲೂಟಿ ಹೊಡೆಯುತ್ತಿದ್ದಾರೆ. ಪೆಟ್ರೋಲ್, ಹಾಲು ಸೇರಿದಂತೆ ಎಲ್ಲದರ ಬೆಲೆ ಹೆಚ್ಚಳವಾಗಿವೆ. ರಸ್ತೆಯಲ್ಲಿ ಓಡಾಟ ಮಾಡೋಣ ಅಂದರೆ ಗುಂಡಿ ಬಿದ್ದಿವೆ. ಇಂದು ರಾಜ್ಯದ ಸಿಎಂ, ತಮ್ಮ ಕೈ ಕೆಳಗೆ ಕೆಲಸ ಮಾಡುವ ಪೊಲೀಸರ ಮುಂದೆ ಕೈ ಕಟ್ಟಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಅಬಕಾರಿ ಇಲಾಖೆಯಲ್ಲಿ ಸಚಿವ ತಿಮ್ಮಾಪುರ ವಾರಕ್ಕೆ 18 ಕೋಟಿ ರೂ. ಮದ್ಯದಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ಮದ್ಯದಂಗಡಿ ಮಾಲೀಕರೇ ದೂರು ಕೊಟ್ಟಿದ್ದಾರೆ. ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ವೈನ್ ಸ್ಟೋರ್​​ಗಳಿವೆ. ಪ್ರತಿಯೊಂದರಿಂದ 20 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.


Share to all

You May Also Like

More From Author