ಹಾವೇರಿ: ಕಾಂಗ್ರೆಸ್ʼನವರು ಎಸ್ಸಿ ಎಸ್ಟಿ ಸಮುದಾಯಕ್ಕೂ ಏನೂ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಎನ್ ಎಂ ತಡಸ್ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ತಾತ್ಕಾಲಿಕ ಸುಖಕ್ಕೆ ಕಾಂಗ್ರೆಸ್ ಗೆ ಮತ ಹಾಕಿದರೆ ಸಾಬರ ಕೈಯಲ್ಲಿ ಕೆಲಸಕ್ಕೆ ಹೋಗಬೇಕಾಗುತ್ತದೆ. ಇಲ್ಲ ಮುಸ್ಲೀಮರಾಗಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ಎಲ್ಲ ವಕ್ಪ್ ಆಸ್ತಿ ಸಮೀಕ್ಷೆ ಮಾಡಲು ಹೇಳಿದ್ದರು. ಭಾರತ ದೇಶ ಉಳಿಯಬೇಕೆಂದರೆ ಹಿಂದು ಧರ್ಮ ಉಳಿಯಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು.
ಕಾಂಗ್ರೆಸ್ ನವರು ಎಸ್ಸಿ ಎಸ್ಟಿ ಸಮುದಾಯಕ್ಕೂ ಏನೂ ಮಾಡಿಲ್ಲ. ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದ್ದರು ಅವರು ನಿಧನ ಹೊಂದಿದರೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಅವರು ಭಾರತ ಇಬ್ಬಾಗ ಆಗುವುದನ್ನು ವಿರೋಧಿಸಿದ್ದರು. ಭಾರತದಲ್ಲಿರುವ ಮುಸ್ಲೀಮರು ಪಾಕಿಸ್ತಾನಕ್ಕೆ ಹೋಗಲಿ, ಪಾಕಿಸ್ತಾನದಲ್ಲಿರುವ ಮುಸ್ಲೀಮರು ಭಾರತಕ್ಕೆ ಬರಲಿ ಎಂದು ಹೇಳಿದ್ದರು. ಆದರೆ, ನೆಹರು ಜಿನ್ನಾ ಕುತಂತ್ರದಿಂದ ದೇಶ ಇಬ್ಬಾಗವಾಯಿತು ಎಂದರು.
ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಮುನ್ನೂರು ಸ್ಥಾನ ಕೊಟ್ಡಿದ್ದರೆ, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಂತೆ, ವಕ್ಪ್ ಕಾಯಿದೆ ತಿದ್ದುಪಡಿ ಮಾಡಲು ಅನುಕೂಲವಾಗುತ್ತಿತ್ತು. ಸಂವಿಧಾನದ 370 ಕಾಯ್ದೆ ಜಾರಿ ಇದ್ದಾಗ ಜಮ್ಮು ಕಾಶ್ಮೀರದಲ್ಲಿ ಯಾವುದೇ ಮೀಸಲಾತಿ ಅವಕಾಶ ಇರಲಿಲ್ಲ. 370 ರದ್ದಾದ ಮೇಲೆ ಐದು ಜನ ದಲಿತರು ವಿಧಾನಸಭೆ ಪ್ರವೇಶಿಸುವಂತೆ ಆಯಿತು. ಈಗ ಗ್ರಾಮ ಪಂಚಾಯತಿಗಿಂದ ಹಿಡಿದು ಎಲ್ಲ ಹಂತದಲ್ಲೂ ದಲಿತರಿಗೆ ಮೀಸಲಾತಿ ದೊರೆಯುವಂತಾಗಿದೆ ಎಂದರು.