ಸರಕಾರದ ಆದೇಶ ಪಾಲಿಕೆಯ ಕಸದ ಬುಟ್ಟಿಗೆ..ಡೆಪಿಟೇಶನ್ ಅವದಿ ಮುಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರಿಲೀವ್ ಮಾಡತಾ ಇಲ್ಲಾ ಕಮೀಷನರ್ ಸಾಹೇಬ್ರು.ಡಿಸಿ ಮೇಡಂ ಏನ್ರೀ ಇದು ಆಡಳಿತ..

Share to all

ಸರಕಾರದ ಆದೇಶ ಪಾಲಿಕೆಯ ಕಸದ ಬುಟ್ಟಿಗೆ..ಡೆಪಿಟೇಶನ್ ಅವದಿ ಮುಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ರಿಲೀವ್ ಮಾಡತಾ ಇಲ್ಲಾ ಕಮೀಷನರ್ ಸಾಹೇಬ್ರು.ಡಿಸಿ ಮೇಡಂ ಏನ್ರೀ ಇದು ಆಡಳಿತ..

ಹುಬ್ಬಳ್ಳಿ:- ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ನಿಯೋಜನೆ ಮೇಲೆ ಬೇರೇ ಬೇರೆ ಇಲಾಖೆಗಳಿಂದ ಬಂದ ಅವಧಿ ಮೀರಿದಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅವರ ಮಾತೃ ಇಲಾಖೆಗೆ ಕೂಡಲೆ ಹಿಂದಿರುಗಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಕಳೆದ ತಿಂಗಳು 15 ರಂದು ಎಲ್ಲಾ ಮಹಾನಗರ ಪಾಲಿಕೆಗಳಿಗೆ ಆದೇಶ ಮಾಡಿದೆ.

 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೊಂದನ್ನು ಬಿಟ್ಟು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಸರಕಾರದ ಆದೇಶ ಆದ ಮೇಲೆ ಸರಕಾರದ ಆದೇಶದ ಅನ್ವಯ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಧಿ ಮೀರಿದವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿದ್ದಾರೆ.

 

ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾತ್ರ ನಿಯೋಜನೆಯ ಅವಧಿ ಮೀರಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇನ್ನೂ ರಿಲೀವ್ ಮಾಡಿಲ್ಲಾ.ಅಂದರೆ ಈ ಪಾಲಿಕೆಗೆ ಸರಕಾರದ ಆದೇಶ ಅಂದರೆ ಕವಡೆ ಕಾಸಿನ ಕಿಮ್ಮತ್ತು ಅನ್ನೋ ತರಹ ನಡೆದುಕೊಳ್ಳುತ್ತಿದೆ.

ಸರಕಾರದ ಆದೇಶ ಪಾಲನೆ ಮಾಡದ ಮಹಾನಗರ ಪಾಲಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮೌನವಹಿಸಿದ್ದಾದರೂ ಏಕೆ ? ಅನ್ನೋ ಮಾತು ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಕೇಳುವಂತಾಗಿದೆ.ಈಗಲಾದರೂ ಸರಕಾರದ ಮಹತ್ವದ ಆದೇಶದ ಬಗ್ಗೆ ಗಮನಹರಿಸತಾರಾ ಸಚಿವ ಸಂತೋಷ ಲಾಡ್ ಸಾಹೇಬ್ರು ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author