ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಿನ ಭರವಸೆ ನೀಡಿದ ಲಾಡ್‌

Share to all

ಮಗುವಿನೊಂದಿಗೆ ಭಿಕ್ಷೆ ಎತ್ತುತ್ತಿದ್ದ ಮಹಿಳೆಗೆ ನೆರವಿನ ಭರವಸೆ ನೀಡಿದ ಲಾಡ್‌
=========================
*ನೆರವಿನ ಭರವಸೆ ನೀಡಿ, ಬದುಕಿನ ಪಾಠ ಹೇಳಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌*

ಧಾರವಾಡ, ಅ. 3: “ಮಗುವಿನೊಂದಿಗೆ ಹೀಗೆ ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಮನೆಗಳಿಗೆ ಹೋಗಿ ಕೆಲಸ ಮಾಡಬಹುದಲ್ವಾ. ಯಾವ ಮನೆಗೆ ಹೋಗುತ್ತಿಯೋ ಅಲ್ಲೇ ಮಗುವನ್ನು ಬಿಟ್ಟು ನೀನು ಕೆಲಸ ಮಾಡಬಹುದು. ನಾನು ನಿನಗೆ ಸಹಾಯ ಮಾಡುತ್ತೇನೆ. ಆದರೆ ಕೆಲಸ ಸಿಕ್ಕರೆ ಒಳ್ಳೆಯದಾಗುತ್ತೆ”

ಹೀಗೆಂದು ಹೊಟ್ಟೆ ಹೊರೆಯಲು ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ತಿಳಿ ಹೇಳಿ ಪುನರ್ವಸತಿಗೆ ಸಹಾಯ ಮಾಡಿದವರು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು.

ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಧಾರವಾಡದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಗಮನಿಸಿದರು. ಕೂಡಲೇ ಆಕೆಗೆ ಈ ರೀತಿ ಭಿಕ್ಷೆ ಬೇಡುವುದು ಸರಿಯಲ್ಲ. ಮನೆ ಕೆಲಸವನ್ನಾದರೂ ಮಾಡು ಎಂದು ಬುದ್ದಿ ಹೇಳಿದರು. “ನಿನ್ನ ಸಮಸ್ಯೆ ನನಗೆ ಅರ್ಥ ಆಗುತ್ತೆ. ನಾನು ಈಗ ಸಹಾಯ ಮಾಡಬಹುದು ಆದರೂ ಕೆಲಸ ಅಂತ ಒಂದಿದ್ದರೆ ಒಳ್ಳೆಯದು ಎಂದುʼ ಹೋಟೆಲ್‌ಗೆ ಕರೆದೊಯ್ದು ಚಹಾ ಕುಡಿಸಿ ಮಾನವೀಯತೆ ಮರೆದರು.

https://youtu.be/RCYGAK_0Mjo?si=eq3wG4m7MGqv5Zcl

ʼಭಿಕ್ಷಾಟನೆಯಲ್ಲಿ ತೊಡಗಿರುವ ಈ ಮಹಿಳೆಯ ಬಗ್ಗೆ ಹಲವು ಬಾರಿ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರೂ ಯಾರೂ ಗಮನ ಹರಿಸಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಸಚಿವರ ಗಮನಕ್ಕೆ ತಂದರುʼ ಆಗ “ಇನ್ನು ಮುಂದೆ ನನಗೆ ಮಾಹಿತಿ ನೀಡಿ” ಎಂದು ಖುದ್ದು ಸಚಿವರೇ ತಮ್ಮ ಮೊಬೈಲ್‌ ನಂಬರ್‌ ನೀಡಿದರು.

“ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಎರಡು ಸಾವಿರ ಕೊಡುತ್ತಿದೆ. ಅದು ಬರುತ್ತಲ್ಲವೇ” ಎಂದು ಪ್ರಶ್ನಿಸಿದ್ದಕ್ಕೆ ” ಅರ್ಜಿ ಹಾಕಿದ್ದೇನೆ. ಆದರೂ ಹಣ ಬಂದಿಲ್ಲ” ಎಂದು ಮಹಿಳೆ ಹೇಳಿದರು. ಆಗ ಕೂಡಲೇ “ಸಂಬಂಧಿಸಿದವರ ಗಮನಕ್ಕೆ ತಂದು ವ್ಯವಸ್ಥೆ ಮಾಡುತ್ತೇನೆ. ಎಲ್ಲಾ ಸೌಲಭ್ಯ ಕೊಡಿಸುತ್ತೇನೆ ನಾನಿರುವಾಗ ಯಾಕೆ ಹೆದರುತ್ತೀಯಾ ಎಂದು ಧೈರ್ಯ ತುಂಬಿದರು.

ಸಂತೋಷ್‌ ಲಾಡ್‌ ಅವರ ಈ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author