ಕಲ್ಲು ಎತ್ತಿ ಹಾಕಿ ಕೇರಂ ಬೋಡ್೯ ಒಡೆಸಿ ದರ್ಪ ತೋರಿದ ಗ್ರಾಮೀಣ ASI.
ಹುಬ್ಬಳ್ಳಿ:- ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಕೆಲವೊಬ್ಬರಿಗೆ ರಾತ್ರಿಯಾಗುತ್ತಿದ್ದಂತೆ ಮೈಮೇಲೆ ದೇವರು ಬಂದಂತೆ ವರ್ತಿಸತಾರಂತೆ.
ಹೌದು ಇಲ್ಲೋಬ್ಬ ಗ್ರಾಮೀಣ ಠಾಣೆಯ ASI ಮೀಸೆ ಮಾವ ಅಂತಾ ಪ್ರಸಿದ್ದಿ ಪಡೆದಿರುವ ರಮೇಶ ಬದ್ರಾಪುರ ರಾತ್ರಿ ಪಾಳೆಯದಲ್ಲಿ ಧರ್ಪ ತೋರಿದ್ದಾರೆ.
ನೈಟ್ ರೌಂಡ್ಸ್ ಗೆಂದು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮಕ್ಕೆ ಹೋಗಿ ಅಲ್ಲಿ ದೇವಸ್ಥಾನವೊಂದರಲ್ಲಿ ಕೇರಂ ಆಡುತ್ತಿದ್ದ ಯುವಕರ ಕೈಯಿಂದಲೇ ಕಲ್ಲು ಎತ್ತಿ ಹಾಕಿ ಕೇರಂ ಒಡೆಸಿದ ಘಟನೆ ನಡೆದಿದೆ.
ಈ ಕೇರಂನ ಮೊದಲು ಒಡಿರಿ ನಾನೇ ನಾಳೆ ಹೊಸದೊಂದು ಕೊಡಿಸ್ತೀನಿ ಒಡಿರಿಲೇ ಎಂದು ಒಡಿಸಿ ಹಾಕಿ ಧರ್ಪ ಮೆರೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನ್ರೀ ಸ್ವಾಮಿ ನಿಮ್ಮ ನಡೆ ಇದು ಮಾಡೋ ಕೆಲಸಾನೇ ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಡಿವೆ ಅದನ್ನು ಬಿಟ್ಟು ದೇವಸ್ಥಾನದಲ್ಲಿ ಕೇರಂ ಆಡುವವರ ಮೇಲೆ ಏಕ್ರೀ ನಿಮ್ಮ ಈ ಧರ್ಪ…ನೀವು ಹೋದ ಜಾಗದ ಒಂದೇ ಒಂದಿಷ್ಟು ದೂರ ಹೋಗಿದ್ದರೆ ಕತ್ತಲಲ್ಲಿ ದೀಪದ ಆಟ ನಡಿತಿದೆ. ಅದನ್ನಾದರೂ ಹೋಗಿ ರೇಡ್ ಮಾಡಬಾರದಾ ಸ್ವಾಮೀ.
ಅಂತಹ ಕೆಲಸ ಮಾಡಿದ್ದರೆ ನಿಮ್ಮ ಸಾಹೇಬ್ರಾದರೂ ಖುಷಿ ಪಡತಿದ್ದರು.
ಉದಯ ವಾರ್ತೆ ಹುಬ್ಬಳ್ಳಿ