ಬಿಜೆಪಿಗೆ ಕಾಂಗ್ರೆಸ್‌ ಕೋವಿಡ್ ಶಾಕ್: ತನಿಖೆಗೆ SIT ರಚನೆ ಮಾಡಲು ಅಸ್ತು ಎಂದ ಸಂಪುಟ!

Share to all

ಬೆಂಗಳೂರು:– ಬಿಜೆಪಿಯ ಕೋವಿಡ್ ಹಗರಣಕ್ಕೆ ಸಂಬಧಪಟ್ಟಂತೆ ತನಿಖೆಗೆ SIT ರಚನೆ ಮಾಡಲು ಸಂಪುಟ ಅಸ್ತು ಎಂದಿದೆ. ಅದರಲ್ಲಿ 918 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದು, ಅಂತಿಮವಾಗಿ ಕೊವಿಡ್​ ಹಗರಣದ ತನಿಖೆಗೆ SIT ರಚನೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆ ಅಸ್ತು ಎಂದಿದೆ.

ಕೊವಿಡ್​ ಹಗರಣದ ಸಂಬಂಧ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆಯೇ ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸಚಿವರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಎಸ್ಐಟಿ ಗೆ ವಹಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ.

ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್​ಕೆ ಪಾಟೀಲ್, ಕೊವಿಡ್​ ವೇಳೆ ಕಿಟ್, ಔಷಧಿ ಖರೀದಿ ವೇಳೆ ಅಕ್ರಮ ನಡೆದಿದೆ. ಕೊವಿಡ್ ಹಗರಣ ಸಂಬಂಧ ಹಲವು ದೂರುಗಳು ದಾಖಲಾಗಿದ್ದವು. ಕೊವಿಡ್​ ಹಗರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲಾಗುವುದು. ವರದಿ ಆಧರಿಸಿ ಎಸ್ಐಟಿ ತನಿಖೆ ಆಗಲಿದೆ . ಅಗತ್ಯ ಬಿದ್ದರೆ FIR ದಾಖಲಾಗುತ್ತೆ, ಚಾರ್ಜ್​ಶೀಟ್ ಕೂಡ ಹಾಕ್ತೇವೆ. ಯಾರ ವಿರುದ್ಧ FIR ದಾಖಲಿಸಬೇಕೆಂದು SIT ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.


Share to all

You May Also Like

More From Author