ಆಸ್ತಿಗಾಗಿ ಮಹಿಳೆ ಬರ್ಬರ ಕೊಲೆ: ಸಂಬಂಧಿಕನಿಂದಲೇ ನಡೀತು ಘೋರ ಕೃತ್ಯ!

Share to all

ಗದಗ:- ಇತ್ತೀಚೆಗೆ ಕರ್ನಾಟಕದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಮರ್ಡರ್ ಪ್ರಕರಣಗಳು ನಡೆಯುತ್ತಿದೆ. ಅದರಂತೆ ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ಸಲಾಖೆಯಿಂದ ತಲೆಗೆ ಹೊಡೆದು ಸಂಬಂಧಿಯೇ ಮಹಿಳೆ‌ಯ ಭೀಕರ ಕೊಲೆ ಮಾಡಿರುವ ಘಟನೆ ಜರುಗಿದೆ.

ಮೃತ ಮಹಿಳೆಯನ್ನು 48 ವರ್ಷದ ಜೈಬುನ್ನಿಸಾ ಕಿಲ್ಲೆದಾರ ಎಂದು ಗುರುತಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಲಿಕ್‌ಸಾಬ ಕೊಲೆ ಮಾಡಿದ ಸಂಬಂಧಿಕ ಎಂದು ಹೇಳಲಾಗಿದೆ.

ಮನೆ ನಿರ್ಮಾಣದಲ್ಲಿ‌ ಆರೋಪಿ ಮಲಿಕ್‌ಸಾಬ ತೊಡಗಿದ್ದ. ಇಂದು ಆರೋಪಿ ಹಾಗೂ ಕೊಲೆಯಾದ ಮಹಿಳೆ ಜೈಬುನ್ನಿಸಾ ಕಿಲ್ಲೆದಾರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಅಲ್ಲೇ ಇದ್ದ ಸಲಾಖೆಯಿಂದ ಮಹಿಳೆ ತಲೆಗೆ ಆರೋಪಿ ಹೊಡೆದಿದ್ದಾರೆ. ಕೂಡಲೇ ನೆಲಕ್ಕೆ ಬಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇನ್ನೂ ಕೊಲೆ ಮಾಡಿದ ನಂತರ ಆರೋಪಿ ಮುಳಗುಂದ ಪೊಲೀಸ್ ಠಾಣೆಗೆ ಸರೆಂಡರ್ ಆಗಿದ್ದಾನೆ.

ಸುದ್ದಿ ತಿಳಿದು ಗದಗ ಗ್ರಾಮೀಣ ಠಾಣಾ ಪಿಎಸ್ಐ ಎಲ್ ಕೆ ಜೂಲಕಟ್ಟಿ ಹಾಗೂ ಮುಳಗುಂದ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.


Share to all

You May Also Like

More From Author