ಅತ್ತಿಗೆಯನ್ನೇ ಕೊಂದ ಮೈದುನ: ರಕ್ತದ ಮಡುವು ಕಂಡು ಬೆಚ್ಚಿಬಿದ್ದ ಗ್ರಾಮ!

Share to all

ಹುಬ್ಬಳ್ಳಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿದೆ. ಅದೇ ರೀತಿ ಮನೆಯಲ್ಲಿನ ಕೌಟುಂಬಿಕ ಸಮಸ್ಯೆ ಜಗಳದವರೆಗೆ ಹೋಗಿ, ಕೊನೆಗೆ ಕೋಪಗೊಂಡ ಮೈದುನ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಎಸ್.ಎಂ ಹುಬ್ಬಳ್ಳಿ ಕೃಷ್ಣನಗರದಲ್ಲಿ ನಿನ್ನೆ (ನ.17) ತಡ ರಾತ್ರಿ ನಡೆದಿದೆ. ಸಾಜೀದಾ ನಾಲಬಂದ (38) ಕೊಲೆಯಾದ ಮಹಿಳೆ. ಆಕೆಯ ಪತಿ ಮಹ್ಮದ್ ಹನೀಫ್ ಗಾಯಗೊಂಡಿದ್ದು, ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಮೈದುನ ನಾಸೀರ್ ನಾಲಬಂದ ಕೊಲೆ ಮಾಡಿದ ಆರೋಪಿ.

ನಾಸೀರ್ ಮನೆಯಲ್ಲಿ ಅಣ್ಣ, ತಮ್ಮ ಅತ್ತಿಗೆ ಮೂವರು ವಾಸವಾಗಿದ್ದು, ಆಗಾಗ ಅವರ ನಡುವೆ ಜಗಳಗಳು ನಡೆಯುತ್ತಿತ್ತು. ಭಾನುವಾರ ಸಹ ಜಗಳ ನಡೆದಿದ್ದು, ಅದು ವಿಕೋಪಕ್ಕೆ ಹೋದ ಪರಿಣಾಮ ಮೈದುನ ನಾಸಿರ್ ಅತ್ತಿಗೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಾಜೀದಾಳನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share to all

You May Also Like

More From Author