ಹಳೇ ಲವರ್ ಫೋನ್‌ ಮಾಡಿ ಸಿಕ್ತೀನಿ ಅಂದ್ರೆ ಹುಷಾರ್..! ಓಡೋಡಿ ಹೋದವನಿಗೆ ಏನಾಯ್ತು ಗೊತ್ತಾ..?

Share to all

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಪೊಲೀಸರು ಏನೇ ಮಾಡಿದ್ರೂ ಅಪರಾಧಿಗಳು ಕ್ರೈಂ ಮಾಡ್ತಾನೆ ಇರ್ತಾರೆ. ಕಳ್ಳತನ, ಕೊಲೆ, ಕಿಡ್ನಾಪ್‌ ಎಲ್ಲಾ ಈಗ ಸಾಮನ್ಯಾ ಆದಂತಿದೆ ಅದೇ ರೀತಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಹಳೆ ಲವರ್​ ಮಾತಿಗೆ ಮರುಳಾಗಿ ಮೀಟ್ ಮಾಡಲು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ಕೋರಮಂಗಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಕೋರಮಂಗಲ ಪೊಲೀಸರಿಂದ ಖತರ್ನಾಕ್ ಗ್ಯಾಂಗ್​ ಬಂಧನವಾಗಿದೆ. ಆಂಧ್ರದ ನೆಲ್ಲೂರು ಮೂಲದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಆಂಧ್ರದಲ್ಲಿ ಕಿಡ್ನಾಪ್ ಮಾಡಿ ಪಾವಗಡ ಹಾಗೂ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಟ್ರ್ಯಾಪ್ ಮಾಡಿ ಸುಲಿಗೆ ಮಾಡಿದ್ದಾಳೆ. ಕೋರಮಂಗಲ ಪೊಲೀಸರಿಂದ ಏಳು ಮಂದಿಯನ್ನು ಬಂಧನ ಮಾಡಿದ್ದಾರೆ. ಬಂಧಿತರು ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ ಎಂದು ತಿಳಿದುಬಂದಿದೆ.

ಆಂಧ್ರದ ನೆಲ್ಲರೂರಿನ ಮೆಡಿಕಲ್ ಶಾಫ್​ನಲ್ಲಿ ಶಿವ ಎಂಬ ವ್ಯಕ್ತಿ ಕೆಲಸ ಮಾಡಿಕೊಂಡಿದ್ದ ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಒಂದು ವರ್ಷದ ಇಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17 ರಂದು ಏಕಾಏಕಿ ಶಿವನಿಗೆ ಕರೆ ಮಾಡಿ ಮೀಟ್​ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟು ಮಾತ್ರವಲ್ಲ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಕೂಡ ಹೇಳಿದ್ದಾಳೆ. ಕೊನೆಗಳಿಗೆಯಲ್ಲಿ ಪೆನುಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಜಾಗ ಶಿಫ್ಟ್ ಆಗಿದೆ.

ಆ ನಂತರ ಮಾಜಿ ಪ್ರೇಯಸಿಯ ಮಾತನ್ನು ನಂಬಿದ ಶಿವ, ತನ್ನ ಬಳಿ ಇದ್ದ ಚಿನ್ನಾಭರಣದೊಂದಿಗೆ ಹೊರಟಿದ್ದಾನೆ. ಪಾವಡಗಡದಲ್ಲಿ ಚಿನ್ನಾಭರಣದೊಂದಿಗೆ ಬಸ್​ನಲ್ಲಿ ಬಂದಿಳಿದ ಶಿವ ಮೌನಿಕಳನ್ನ ಭೇಟಿಯಾಗಿದ್ದಾನೆ. ಆನಂತರ ಪಾವಗಡದ ಹೋಟೆಲ್ ಒಂದಕ್ಕೆ ಕರೆದೊಯ್ದಿದ್ದಾರೆ. ಕೆಲವು ಗಂಟೆಗಳ ಬಳಿಕ ಇಬ್ಬರು ಪಾವಗಡದಲ್ಲಿ ಸುತ್ತಾಡೋಕೆ ಹೋಗಿದ್ದಾರೆ, ಆಗ ಕಾರ್‌ನಲ್ಲಿ ಬಂದ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿ ಶಿವನ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 


Share to all

You May Also Like

More From Author