ಬೀದರ್: ದೇಶದಲ್ಲಿ ನೆಹರೂಯಿಂದ ಮನಗೋಹನ್ ಸಿಂಗ್ ವರೆಗೂ ವಕ್ಫ್ ಗೆ ಅಧಿಕಾರ ಕೊಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಜನ ಜಾಗೃತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನೆಹರೂಯಿಂದ ಮನಗೋಹನ್ ಸಿಂಗ್ ವರೆಗೂ ವಕ್ಫ್ ಗೆ ಅಧಿಕಾರ ಕೊಟ್ಟಿದ್ದಾರೆ. ಅವರಿಗೆ ಈಗ ಎಲ್ಲ ಅಧಿಕಾರ ಇದೆ ಅಂತ ರಾತ್ರಿ ಹಾಕ್ತಾರೆ ಬೆಳಗ್ಗೆ ತೆಗೀತಾರೆ. ರೈತರ ಮೇಲೆ ವಕ್ಫ್ ಅಧಿಕಾರಿಗಳು ದಬ್ಬಾಳಿಕೆ ಮಾಡ್ತಾ ಇದ್ದಾರೆ. ಜನ ಜಾಗೃತಿ ಆಗಬೇಕು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಕರೆ ಕೊಟ್ಟರು.
ಪಾರ್ಲಿಮೆಂಟ್ ನಲ್ಲಿ ವಕ್ಫ್ ತೆಗಿಯೋ ಕೆಲ್ಸಾ ನಡೀತಾ ಇದೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡಬೇಕಿದೆ . ವಕ್ಫ್ ನಲ್ಲಿ ಎಲ್ಲ ಸಾಬರೇ ಇದಾರೆ ಅವರ ಎದುರು ಕೈ ಕಟ್ಟಿ ನಿಲ್ಲಬೇಕಿದೆ. ಅದನ್ನ ರದ್ದು ಮಾಡಿ ಇವಾಗ ಪ್ರಧಾನಿ ಮೋದಿ ಅವರು ಜಿಲ್ಲಾಧಿಕಾರಿಗೆ ಅಧಿಕಾರ ಕೊಡಲು ತಯಾರಿ ಮಾಡ್ತಾ ಇದ್ದಾರೆ. ಜಾಯಿಂಟ್ ಪರ್ಲಿಮೆಂಟರಿ ಕಮಿಟಿಯವರು ಬಂದಿದ್ರು. ಸರ್ವೇ ಮಾಡಿ ಅವರು ವರದಿ ಕೊಡ್ತಾರೆ ಎಂದು ತಿಳಿಸಿದರು.