ಬೆಂಗಳೂರು: ಜಾತಿ ನಿಂದನೆಜೊತೆ ಜೀವ ಬೆದರಿಕೆ ಆರೋಪ ಹೊತ್ತ ಶಾಸಕ ಮುನಿರತ್ನ ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಆಚೆ ಬಂದಿದ್ದರು. ಬಳಿಕ ಅತ್ಯಾಚಾರ ಪ್ರಕರಣದಲ್ಲೂ ಸಹ ಮತ್ತೆ ಜೈಲು ಸೇರಿದ್ದರು. ಬಳಿಕ ಆ ಪ್ರಕರಣದಲ್ಲೂ ಸಹ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ಮತ್ತೆ ಜಾತಿ ನಿಂದನೆ ಪ್ರಕರಣ ಮುನಿರತ್ನ ಅವರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ.
ಹೌದು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೋ ಮುನಿರತ್ನ ಅವರದ್ದೇ ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ. ಫೋನ್ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮುನಿರತ್ನ ವಿರುದ್ಧ ಗುತ್ತಿಗೆದಾರ ವೇಲು ನಾಯ್ಕರ್ ದೂರು ದಾಖಲಿಸಿದ್ದು,
ಜೊತೆಗೆ ಅವರು ಪೊಲೀಸರಿಗೆ ನೀಡಿದ್ದ ಆಡಿಯೋ ಕ್ಲಿಪ್ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ ಎಂದು ದೃಢವಾಗಿದೆ ಎಂದು ಸಿಐಡಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.