ಫಿಕ್ಸಿಂಗ್ ನಲ್ಲಿ CSK ಕಿಂಗ್: ಅಂಪೈರ್ ಗಳ ಜೊತೆಗಿನ ಒಪ್ಪಂದ ಬಯಲು ಮಾಡಿದ ಐಪಿಎಲ್ ಮಾಜಿ ಅಧ್ಯಕ್ಷ!

Share to all

ಚೆನ್ನೈ ಸೂಪರ್ ಕಿಂಗ್ಸ್ IPL ನಲ್ಲಿ ಅಪಾರ ಅಬಿಮಾನಿಗಳನ್ನು ಹೊಂದಿರುವ ತಂಡ. ಈ ತಂಡದ ಮೇಲೆ ಫಿಕ್ಸಿಂಗ್ ಆರೋಪ ಇದೇನು ಮೊದಲಲ್ಲ. ಹಿಂದೆಯೂ ಇದೇ ಆರೋಪದಲ್ಲಿ 2 ವರ್ಷ ಬ್ಯಾನ್ ಆಗಿರೋದು ಎಲ್ಲರಿಗೂ ಗೊತ್ತೇ ಇದೆ.

ಇದೆ ವಿಚಾರವಾಗಿ IPL ಮಾಜಿ ಅಧ್ಯಕ್ಷ ಲಲಿತ್ ಮೋದಿ ಮಾತನಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರು ಸಿಎಸ್​​ಕೆ ಪಂದ್ಯಗಳಿಗೆ ಚೆನ್ನೈ ಮೂಲದ ಅಂಪೈರ್​​ಗಳನ್ನು ನೇಮಿಸುತ್ತಿದ್ದರು. ಮೊದಲು ನಾನು ಈ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಸಿಎಸ್​​ಕೆ ಪಂದ್ಯಗಳಿಗೆಲ್ಲಾ ಚೈನ್ನೈನ ಅಂಪೈರ್​​​ಗಳೇ ಇರುತ್ತಿದ್ದರು. ಇದನ್ನು ಅಂಪೈರ್ ಫಿಕ್ಸಿಂಗ್ ಎಂದು ಕರೆಯಲಾಗುತ್ತದೆ.

ಸಿಎಸ್​​ಕೆ ಪರ ತೀರ್ಪು ಬರಲೆಂದು ತಮಗೆ ಬೇಕಾದ ಅಂಪೈರ್​​ಗಳನ್ನು ನೇಮಿಸುತ್ತಿದ್ದರು. ಈ ಮೂಲಕ ಫಿಕ್ಸಿಂಗ್ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಷಯವನ್ನು ಬಹಿರಂಗಪಡಿಸಲು ನಾನು ಪ್ರಯತ್ನಿಸಿದೆ. ಈ ವೇಳೆ ಅವರು ನನ್ನ ವಿರುದ್ಧ ನಿಂತರು. ಅಂದು ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.

ನಾನು ಸಿಎಸ್​​ಕೆ ಫ್ರಾಂಚೈಸಿಯ ಕಳ್ಳಾಟವನ್ನು ಬೆಳಕಿಗೆ ತಂದಿದ್ದರಿಂದ ಅವರು ನನ್ನ ಕಡು ವಿರೋಧಿಯಾದರು. ಹೀಗಾಗಿ ನನ್ನ ವಿರುದ್ಧ ಭ್ರಷ್ಟಚಾರದ ಅರೋಪಳನ್ನು ಹೊರಿಸಿದರು. ಈಗಲೂ ಖಚಿತವಾಗಿ ಹೇಳಬಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ಅಂಪೈರ್​ಗಳನ್ನೇ ಫಿಕ್ಸ್ ಮಾಡಿಕೊಳ್ಳುತ್ತಿದ್ದದ್ದು ನಿಜ ಎಂದು ಲಲಿತ್ ಮೋದಿ ಆರೋಪಿಸಿದ್ದಾರೆ.


Share to all

You May Also Like

More From Author