ಮುಂಬೈ:- ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟಿಗ ಹೃದಯ ಸ್ತಂಭನದಿಂದ ಕುಸಿದು ಸಾವನ್ನಪ್ಪಿರುವ ಘಟನೆ ಜರುಗಿದೆ. ಮೃತ ಆಟಗಾರನನ್ನು ಕ್ರಿಕೆಟಿಗ ಇಮ್ರಾನ್ ಪಟೇಲ್ ಎಂದು ಗುರುತಿಸಲಾಗಿದೆ. ಮೃತ ಇಮ್ರಾನ್ ಪಟೇಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಪಿಚ್ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಹೇಳಿಕೊಂಡರು. ಅಂಪೈರ್ಗಳು ಮೈದಾನದಿಂದ ಹೊರಹೋಗಲು ಅನುಮತಿ ನೀಡಿದರು. ಆದರೆ, ಪೆವಿಲಿಯನ್ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದರು.
ನೇರಪ್ರಸಾರವಾಗುತ್ತಿದ್ದ ಪಂದ್ಯಾವಳಿಯ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್ ಮೃತಪಟ್ಟಿದ್ದಾರೆ ಇಮ್ರಾನ್ ಅವರು ತುಂಬಾ ಆರೋಗ್ಯವಾಗಿದ್ದರು. ದೈಹಿಕವಾಗಿ ಸದೃಢರಾಗಿದ್ದರು. ಆದರೆ ಹೃದಯ ಸ್ತಂಭನದಿಂದ ಮೃತಪಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ