ಜನರಿಗೆ ದರ್ಪ ತೋರಿಸಿದ್ರೆ ಮೆಟ್ ಮೆಟ್ನಲ್ಲಿ ಹೊಡಿತಾರೆ ಹುಷಾರ್! ಶಿಕ್ಷಣ ಸಚಿವರನ್ನು ನಿಂದಿಸಿದವನ ವಿರುದ್ಧ ಕೇಸ್ ದಾಖಲು!

Share to all

ಶಿವಮೊಗ್ಗ:- ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.ಮೋಹಿತ್ ನರಸಿಂಹ ಮೂರ್ತಿ ಎಂಬುವರ ವಿರುದ್ಧ ವಿನೋಬನಗರ ಠಾಣೆ ಪೊಲೀಸರು ಸುಮೋಟೋ ದೂರು ದಾಖಲಿಸಿಕೊಂಡಿದ್ದಾರೆ.

ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ನಿಮ್ಮಪ್ಪನ ಮನೆ ದುಡ್ಡಲ್ಲಿ ಏನಾದ್ರು ಅವರಿಗೆ ಶಿಕ್ಷಣ ಕೊಡ್ತಿರಿ? ನೀನು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡು ಲೂಟಿ ಮಾಡಿ ಅನ್ನೋದು ಸಾಮಾನ್ಯ ಪರಿಜ್ಞಾನ ಇರ್ಲಿ. ಸಾರ್ವಜನಿಕರ ದುಡ್ಡಲಿ ದರ್ಪ ಮಾಡುತ್ತೀಯನೋ, ಸಾರ್ವಜನಿಕರು ದುಡ್ಡಲಿ ಬದುಕುತ್ತಿದ್ದೀಯ ನಿಮ್ಮಪ್ಪನ ಮನೆ ದುಡ್ಡಲಿ ಅಲ್ಲ ಏನೋ ನಿನ್ನ ದರ್ಪ ನೀನು ನಿನ್ನ ಕುಟುಂಬದವರು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡಲ್ಲಿ. ಲೂಟಿ ಮಾಡಿ ನೀವು ಮಾಜಾ ಮಾಡಿಕೊಂಡು ಸಾರ್ವಜನಿಕರ ಮೇಲೆ ದರ್ಪ ತೋರುಯನೋ?

ಸಾರ್ವಜನಿಕರ ಸೇವೆ ಮಾಡೋಕೆ ಯೋಗ್ಯತೆ ಇಲ್ಲ, ಅಂದರೆ ರಾಜಿನಾಮೆಕೊಟ್ಟು ಹೋಗಿ ಮಜಾ ಮಾಡಲೆ ಮನೇಲಿ. ದರ್ಪ ತೋರಿಸುತ್ತೀಯ ಮೆಟ್ ಮೆಟ್ ನಲ್ಲಿ,, ಹೊಡಿತಾರೆ ರೋಡಲಿ, ಯಾರ ಮೇಲೂ ದರ್ಪ ತೋರಿಸೋದು ಸಾರ್ವಜನಿಕರ ಪರಿಶ್ರಮದಿಂದ ನೀವು ಕೂತುಕೊಂಡಿರೋದು ಅಧಿಕಾರದಲ್ಲಿ ನೆನಪಿರಲಿ. ಸಾರ್ವಜನಿಕರ ಆಸ್ತಿ ಲೂಟಿ ಮಾಡುವುದು ಪುನಃ ಸಾರ್ವಜನಿಕರ ಮೇಲೆ ದರ್ಪ ತೋರಿಸುವುದು ಎನ್ ನಿಮ್ಮಪ್ಪನ ಮನೆಯಿಂದ ತಂದುಕೊಡುತ್ತೀಯೇನೋ? ದೌರ್ಜನ್ಯ ಮಾಡಿರುವ ವಿದ್ಯಾರ್ಥಿಗಳಿಗೆ ಕ್ಷಮೆ ಕೇಳು ಇಲ್ಲಾಂದರೆ ಮೆಟ್ ಮೆಟ್ ಹರಿತಾವ” ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

ಆರೋಪಿ ಮೋಹಿತ್ ನರಸಿಂಹ ಮೂರ್ತಿ ಸಚಿವರ ವಿರುದ್ಧ ಅವಾಚ್ಯವಾಗಿ ನಿಂದಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಎಕ್ಸ್​​ ಮತ್ತು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.


Share to all

You May Also Like

More From Author