Champions trophy 2025: ಕಡ್ಡಿ ಮುರಿದಂತೆ ಆಗಲ್ಲ ಎಂದ ಭಾರತ! ಪಾಕ್ ಗೆ ಹೈಬ್ರಿಡ್ ಮಾದರಿಯೇ ಗಟ್ಟಿ!‌

Share to all

ಪಿಸಿಬಿಗೆ ಬಿಗ್​ ಶಾಕ್ ಎದುರಾಗಿದ್ದು, ಬಿಸಿಸಿಐ ಪರ 6 ಬೋರ್ಡ್​ಗಳು ನಿಂತಿವೆ. ಹೀಗಾಗಿ ಪಾಕಿಸ್ತಾನಕ್ಕೆ ಇರುವುದು ಎರಡೇ ಆಯ್ಕೆ ಎನ್ನಲಾಗಿದೆ. ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾವಳಿಯ ನಿರ್ವಹಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟೂರ್ನಿಯ ಆಯೋಜನೆಗೆ ಸಂಬಂಧಿಸಿದಂತೆ ಶುಕ್ರವಾರ ಐಸಿಸಿ ಮಂಡಳಿ ಸದಸ್ಯರು ಸಭೆ ನಡೆಸಿದ್ದು, ಈ ವರ್ಚುವಲ್ ಸಭೆಯಲ್ಲಿ ಐಸಿಸಿ ಪಾಕಿಸ್ತಾನಕ್ಕೆ 2 ಆಯ್ಕೆ ನೀಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದೆ.

ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ ಸಂಬಧಪಟ್ಟಂತೆ ಪಾಕಿಸ್ತಾನಕ್ಕೆ ಹೋಗಲು ಆಗಲ್ಲ ಎಂದು ಭಾರತ ಕಡ್ಡಿ ಮುರಿದಂತೆ ಹೇಳಿಕೆ ನೀಡಿದೆ. ಪಾಕಿಸ್ತಾನ ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಸಿಸಿ ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗೆ ವರ್ಚುವಲ್ ಸಭೆ ನಡೆಸಿತ್ತು. ಆದರೂ ಈ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಸನಿವಾರಕ್ಕೆ ಈ ಸಭೆಯನ್ನು ಮುಂದೂಡಲಾಗಿದೆ.

ಆದಾಗ್ಯೂಸಭೆಯಲ್ಲಿ ಭಾಗಶಃ ಕ್ರಿಕೆಟ್ ಮಂಡಳಿಗೂ ಭಾರತದ ಪರ ನಿಂತಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲು ಸಮ್ಮತಿ ಸೂಚಿಸಿವೆ ಎಂದು ವರದಿಯಾಗಿದೆ. ವರ್ಚುವಲ್ ಸಭೆ 15 ರಿಂದ 20 ನಿಮಿಷಗಳ ಕಾಲ ನಡೆಯಿತು. ಈ ವೇಳೆ ಪ್ರಮುಖ ಮೂರು ಆಯ್ಕೆಗಳ ಬಗ್ಗೆ ಚರ್ಚಿಸಲಾಯಿತ್ತಾದರೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಐಸಿಸಿ ಶನಿವಾರಕ್ಕೆ ಸಭೆಯನ್ನು ಮುಂದೂಡಿದೆ.

ಸಭೆಯಲ್ಲಿ ಭಾರತದ ಪ್ರಸ್ತಾವನೆಗೆ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ 7 ಮಂಡಳಿಗಳು ಒಪ್ಪಿಗೆ ಸೂಚಿಸಿವೆ ಎಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಮ್ಮ ಸಮ್ಮತಿ ಇದೆ ಎಂದು 7 ಕ್ರಿಕೆಟ್ ಮಂಡಳಿಗಳು ಐಸಿಸಿಗೆ ತಿಳಿಸಿವೆ ಎಂದು ವರದಿಯಾಗಿದೆ

ಪಾಕಿಸ್ತಾನ ಮಾತ್ರ ಹೈಬ್ರಿಡ್ ಮಾದರಿಯನ್ನು ಒಪ್ಪಲು ಸಿದ್ದವಿಲ್ಲ. ಹೀಗಾಗಿ ಪಾಕಿಸ್ತಾನ ಮಾತ್ರ ಏಕಾಂಗಿಯಾಗಿ ನಿಂತು ಹೈಬ್ರಿಡ್ ಮಾದರಿಗೆ ವಿರೋಧ ವ್ಯಕ್ತಪಡಿಸಿದೆ. ವರದಿಯ ಪ್ರಕಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಎಲ್ಲಾ ಕ್ರಿಕೆಟ್ ಮಂಡಳಿಗಳು ಭಾರತದ ಜೊತೆಯಲ್ಲಿದ್ದು, ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಡಲು ಸಿದ್ಧವಾಗಿವೆ.


Share to all

You May Also Like

More From Author