ಡೆಪಿಟೇಶನ್ ಅವದಿ ಮುಗಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ರಿಲೀವ್ ಡ್ರಾಮಾ..ಪಾಲಿಕೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಕರವೇ..
ಹುಬ್ಬಳ್ಳಿ:- ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ನಿಯೋಜನೆ ಮೇಲೆ ಬೇರೇ ಬೇರೆ ಇಲಾಖೆಗಳಿಂದ ಬಂದ ಅವಧಿ ಮೀರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅವರ ಮಾತೃ ಇಲಾಖೆಗೆ ಕೂಡಲೆ ಹಿಂದಿರುಗಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಕಳೆದ ಅಕ್ಟೋಬರ್ 15 ರಂದು ಎಲ್ಲಾ ಮಹಾನಗರ ಪಾಲಿಕೆಗಳಿಗೆ ಆದೇಶ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೊಂದನ್ನು ಬಿಟ್ಟು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಸರಕಾರದ ಆದೇಶ ಆದ ಮೇಲೆ ಸರಕಾರದ ಆದೇಶದ ಅನ್ವಯ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಧಿ ಮೀರಿದವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿದ್ದಾರೆ.
ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾತ್ರ ನಿಯೋಜನೆಯ ಅವಧಿ ಮೀರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪಾಲಿಕೆಯ ಆಯುಕ್ತರು ರಿಲೀವ್ ಮಾಡದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಪ್ರತಿಭಟನೆಗೆ ಸಜ್ಜಾಗಿವೆ..ಈಗಾಗಲೇ ಪಾಲಿಕೆಯ ಆಯುಕ್ತರಿಗೆ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.