ಕಿಮ್ಸ್ ಆಸ್ಪತ್ರೆಯಲ್ಲಿಯೇ ಕೆಲಸ..ಕಿಮ್ಸ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರು..ಅಯ್ಯಪ್ಪ ಏನಿದು ನಿನ್ನ ಲೀಲೆ..
ಹುಬ್ಬಳ್ಳಿ:-ಇವನ ಹೆಸರು ಶಂಕರ ಚವಾಣ ಅಂತಾ ಈತನಿಗೆ ತಂದೆ ಇಲ್ಲಾ..ತಾಯಿನೂ ಇಲ್ಲಾ…ಬಾಲ್ಯದಿಂದ ದೊಡ್ಡಮ್ಮನ ಮನೆಯಲ್ಲಿ ಬೆಳೆದ ಶಂಕರ ಕಳೆದ ಹದಿಮೂರು ವರ್ಷದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವಾಡ್೯ ಬಾಯ್ ಆಗಿ ಕೆಲಸ ಮಾಡಿಕೊಂಡು ಬಂದಿದ್ದ..
ವಿಧಿಯಾಟ ಬಲ್ಲವರು ಯಾರು ? ಎನ್ನುವಂತೆ ಹದಿಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಕಿಮ್ಸ್ ಆಸ್ಪತ್ರೆಯಲ್ಲಿಯೇ ಇಂದು ಕೊನೆಯುಸಿರೆಳಿದಿದ್ದಾನೆ.
ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ಸಾಯಿನಗರದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕರ ಇಂದು ಸಾವನ್ನಪ್ಪಿದ್ದಾರೆ.
ಮೂಲತಃ ಧಾರವಾಡ ಬಳಿಯ ಸತ್ತೂರ ನಿವಾಸಿಯಾಗಿದ್ದ ಶಂಕರ ಉಣಕಲ್ ಗ್ರಾಮದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದ.ಇದೇ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿ ವೃತ ಕೈಕೊಂಡಿದ್ದ ಶಂಕರ ಬಾಳಲ್ಲಿ ವಿಧಿಯಾಟ ಅಯ್ಯಪ್ಪನ ದರ್ಶನ ಪಡೆಯಲು ಬಿಡಲಿಲ್ಲಾ..