ಬೆಳೆ ನಷ್ಟವಾಗಿರುವ ರೈತರು ಪರಿಹಾರ ಪಡೆಯಬೇಕಾದರೆ ಎಪ್ ಆಯ್ ಡಿ ಗುರುತಿನ ಸಂಖ್ಯೆ ಕಡ್ಡಾಯ.
ಧಾರವಾಡ:-ಧಾರವಾಡ ಜಿಲ್ಲೆಯನ್ನು ಬರ ಪೀಡಿತ ಅಂತಾ ಈಗಾಗಲೇ ಸರಕಾರ ಘೋಷಣೆ ಮಾಡಿದೆ.ಆದರೆ ಬರ ಗೋಷಣೆಯಾದ ಮೇಲೆ ಬೆಳೆ ನಷ್ಟವಾದ ರೈತರು ಪರಿಹಾರಧನ ಪಡೆಯಲು ಭೂಮಿ ವಿವರ ಇರುವ FID ನಂಬರ ಕಡ್ಡಾಯ ಇರಲೇ ಬೇಕೆಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ..
ಈಗಾಗಲೇ ಕ್ರಷಿ ಇಲಾಖೆಯ ಜಂಟಿ ನಿರ್ದೇಶರ ನೇತ್ರತ್ವದಲ್ಲಿ ರೈತರ ಪ್ರೂಟ್ಸ್ ಐಡಿ ಸ್ರಷ್ಟಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಪ್ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಪರಿಹಾರ ಸೌಲಬ್ಯ ಸಿಗಲಿದೆ.ಆದ್ದರಿಂದ ಜಿಲ್ಲೆಯ ಎಲ್ಲ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೇ ನಂಬರನ್ನು ಕೂಡಲೇ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು.ಸರಕಾರದಿಂದ ಬರ ಪರಿಹಾರ ಬಿಡುಗಡೆಯಾದಾಗ ಡಿಬಿಟಿ(ನೇರ ರೈತರ ಖಾತೆಗೆ) ಮೂಲಕ ಹಣ ಬಿಡುಗಡೆ ಮಾಡಲಾಗುವುದು. ಪ್ರೂಟ್ಸ್ ಐಡಿ ಬರ ಪರಿಹಾರ ಹಣ ಮಾತ್ರವಲ್ಲದೇ ಸರಕಾರದ ಎಲ್ಲಾ ಯೋಜನೆಗಳಿಗೂ ಅನ್ವಯವಾಗಲಿದೆ.
##ಪ್ರೂಟ್ಸ್ ಐಡಿ ಮಾಡಿಸುವುದು ಹೇಗೆ##
ಆಧಾರ ಕಾಡ್೯,ಬ್ಯಾಂಕ ಪಾಸ್ ಬುಕ್,ಜಮೀನುಗಳ ಉತಾರ,ಮೋಬ್ಯೆಲ್ ಸಂಖ್ಯೆ ಯೊಂದಿಗೆ ಕಂದಾಯ ಇಲಾಖೆ, ತೋಟಗಾರಿಕೆ,ಕ್ರಷಿ ಇಲಾಖೆ,ರೇಷ್ಮೇ,ಪಶುಸಂಗೋಪನೆ, ಮತ್ತು ಮೀನುಗಾರಿಕೆ ಇಲಾಖೆ ಕಛೇರಿಗಳಲ್ಲಿ ಸಲ್ಲಿಸಬೇಕು.
ಉದಯ ವಾರ್ತೆ ಧಾರವಾಡ