ಯುವಕನ ಭರ್ಭರ ಕೊಲೆ. ಭಯಾನಕ ಕೊಲೆ.. ಸಿಸಿ ಕ್ಯಾಮರಾದಲ್ಲೆ ಸೆರೆಯಾದ ದೃಶ್ಯ..
ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಬಾರ್ ಪಾರ್ಕಿಂಗ್ ಸ್ಥಳದಲ್ಲಿ ಕಳೆದ ರಾತ್ರಿ ನಡೆದ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ..ಆಕಾಶ ವಾಲ್ಮೀಕಿ ಎಂಬಾತನನ್ನು ಮೂವರು ಮನಬಂದಂತೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕೊಲೆ ಮಾಡಿದ ವಿಡಿಯೋ ನೋಡಿದ್ರೆ ಬೆಚ್ಚಿಬಿಳ್ಳುವಂತೆ ನಡೆದಿದೆ.
ವಿಡಿಯೋ ಇದೆ.
ಕೊಲೆಗಾರರು ಸ್ಕೂಟಿಯಲ್ಲಿ ಮುಂದೆ ಸಾಗುತ್ತಿದ್ದಂತೆ, ಮುಂದೆ ಸಿಕ್ಕ ಆಕಾಶ ವಾಲ್ಮೀಕಿ ಮೇಲೆ ಏಕಾಏಕಿ ಎರಗಿ ಮನಬಂದಂತೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಆಕಾಶ ಸ್ಥಳದಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾನೆ, ಈ ಕೊಲೆ ಮಾಡಿರುವ ದೃಶ್ಯಾವಳಿಗಳು ಎಂತವರನ್ನು ಬೆಚ್ಚಿಬೀಳಿಸುವಂತಿವೆ.
ಈಗಾಗಲೇ ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಸಿದ್ದಾರೆ.