ಜನಪ್ರತಿನಿದಿಗಳ ಕೈಗೊಂಬೆಯಾದರಾ ಪಾಲಿಕೆಯ ಅಧಿಕಾರಿಗಳು..ಜೋನ್ ನಾಲ್ಕರಲ್ಲಿ ಬೊಂಬೆಯಾಟ..ಏನ್ರೀ ಕಮೀಷನರ್ ಸಾಹೇಬ್ರೇ ಇದು.

Share to all

ಜನಪ್ರತಿನಿದಿಗಳ ಕೈಗೊಂಬೆಯಾದರಾ ಪಾಲಿಕೆಯ ಅಧಿಕಾರಿಗಳು..ಜೋನ್ ನಾಲ್ಕರಲ್ಲಿ ಬೊಂಬೆಯಾಟ..ಏನ್ರೀ ಕಮೀಷನರ್ ಸಾಹೇಬ್ರೇ ಇದು.

ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ AEE ಅಂತಾ ಸರಕಾರ ಜಗದೀಶ ದೊಡಮನಿ ಅವರನ್ನ ಆದೇಶ ಮಾಡಿ ಕಳಿಸಿದೆ.ಸರಕಾರದ ಆದೇಶ ಪಾಲನೆ ಮಾಡಿದ ಹಿಂದಿನ ಕಮೀಷನರ್ ಜೋನ್ -4 ಕ್ಕೆ AEE ಅಂತಾ ಆದೇಶ ಮಾಡಿದ್ದೂ ಆಗಿದೆ.ಆದರೆ ಈಗ ಅಲ್ಲಿ ನಡೆದಿರುವುದು ಹಗಲು ಬೊಂಬೆಯಾಟ.

Oplus_131072

ಜೋನ್ ನಾಲ್ಕರಲ್ಲಿ AEE ಖಾಲಿ ಹುದ್ದೆ ಇರೋದರಿಂದ ಅಲ್ಲಿ ರಾಜಕೀಯ ಪ್ರಭಾವ ಬಳಸಿ ಜ್ಯೂನಿಯರ್ ಎಂಜನೀಯರಾದ ಮಂಜುಳಾ ಹಿರೇಮಠ ಅವರನ್ನ AEE ಹುದ್ದೆಗೆ ತಂದು ಹಾಕಿದ್ದಾರೆ.ಆದರೆ ಈಗ ಆ ಜಾಗಕ್ಕೆ AEE ಅಂತಾ ಒಬ್ಬ ಅಧಿಕಾರಿ ಬಂದರೂ ಆ ಅಮ್ಮ ಸ್ಥಾನ ಬಿಟ್ಟುಕೊಡತಿಲ್ಲಾ.

ಅವಳ ಹಠಕ್ಕೆ ಕಮೀಷನರ್ ಮಣಿದರಾ ಅಥವಾ ರಾಜಕೀಯ ಪ್ರಭಾವದಿಂದ ಸರಕಾರದ ನಿಯಮಗಳನ್ನು ಗಾಳಿಗೆ ತೂರಿದರಾ ಕಮೀಷನರ್ ಅನ್ನೋದ ಗೊತ್ತಾಗಬೇಕಾಗಿದೆ.

ಒಂದು JE ಹುದ್ದೆಯಲ್ಲಿರುವವರನ್ನು AEE ಮಾಡೋದು ಯಾವ ನಿಯಮದಲ್ಲಿದೆ ಅನ್ನೋದನ್ನ ಪಾಲಿಕೆಯ ಅಧಿಕಾರಿಗಳು ಸ್ಪಷ್ಟಪಡಿಸಬೇಕು.ಇಲ್ಲದೇ ಹೋದರೆ AEE ಗಳು JE ಹುದ್ದೆಯಲ್ಲಿ JE ಗಳು AEE ಹುದ್ದೆಯಲ್ಲಿ ಇದ್ದರೆ ಅಚ್ಚರಿ ಪಡಬೇಕಿಲ್ಲಾ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author