ಮತ್ತೆ ಮುನ್ನೆಲೆಗೆ ಬಂದ ನೇಹಾ ಹಿರೇಮಠ ಕೊಲೆ ಪ್ರಕರಣ…ಪಿಸಿ ಜಾಬಿನ್ ಕಾಲೇಜಿಗೆ ಭೇಟಿ ನೀಡಿದ ಪ್ರಮೋದ ಮುತಾಲಿಕ್..ಕೊಲೆಗಡುಕನನ್ನು ಕಾಲೇಜಿನಿಂದ ಕಿತ್ತೊಗೆಯಿರಿ…
ಹುಬ್ಬಳ್ಳಿ:- ಕಳೆದ ವರ್ಷ ಎಪ್ರಿಲ್ 18 ರಂದು ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.ಆರೋಪಿ ಫಯಾಜ್ ಓದುತ್ತಿರುವ ಕಾಲೇಜಿಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ಕೊಲೆಗಾರನನ್ನು ಕಾಲೇಜಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಾಚಾರ್ಯರರ ವಿರುದ್ಧ ಹರಿಹಾಯ್ದರು ಅಲ್ಲದೇ ತಕ್ಷಣ ಅವನನ್ನು ಕಾಲೇಜಿನಿಂದ ತೆಗೆದು ಹಾಕದಿದ್ದರೆ ಧರಣಿ ಕುಳಿತುಕೊಳ್ಳುವ ಎಚ್ಚರಿಕೆ ನೀಡಿದರು.
ಕಾಲೇಜಿನಲ್ಲಿ ಪರೀಕ್ಷೆ ನಡೆಯುವಾಗ ಕಾಫಿ ಮಾಡಿದರೆ ವಿದ್ಯಾರ್ಥಿಗಳನ್ನ ಸಸ್ಪೆಂಡ್ ಮಾಡತೀರಿ,ಕಾಲೇಜು ಕ್ಯಾಂಪಸ್ಸನಲ್ಲಿಯೇ ಕೊಲೆ ಮಾಡಿದ ವ್ಯಕ್ತಿಯನ್ನ ಇನ್ನೂ ಕಾಲೇಜಿನಲ್ಲಿ ಇಟ್ಟುಕೊಂಡಿದ್ದೀರಿ ಅಂದರೆ ಏನರ್ಥ ಎಂದು ಮುತಾಲಿಕ ಪ್ರಶ್ನೆ ಮಾಡಿದ್ದಾರೆ.