ಉದ್ಯೋಗ ಮೇಳದ “ಜರ್ಸಿ” ಬಿಡುಗಡೆ: ನಿರುದ್ಯೋಗಿಗಳಿಗೆ ಸುವರ್ಣ ಅವಕಾಶ..
ಹುಬ್ಬಳ್ಳಿ: ಜನರ ಜೀವನ ಸುಗಮಗೊಳಿಸಲು ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಶನಿವಾರ ನಡೆಸಲಿರುವ ಉದ್ಯೋಗ ಮೇಳದ “ಜರ್ಸಿ”ಯನ್ನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.
50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ, 2500 ಕ್ಕೂ ಹೆಚ್ಚು ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಎಸ್.ಪಿ.ಫೌಂಡೇಷನ್ ಉದ್ಯೋಗ ಮೇಳವನ್ನ ಹಮ್ಮಿಕೊಂಡಿದ್ದು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಕಾರ ನೀಡಿದೆ.
ನವಲಗುಂದ ಕ್ಷೇತ್ರದ ಜೊತೆ ಯಾವುದೇ ಭಾಗದ ನಿರುದ್ಯೋಗಿಗಳು ಮೇಳದ ಪ್ರಯೋಜನ ಪಡೆಯಬೇಕೆಂದು ಫೌಂಡೇಷನ್ ಮನವಿ ಮಾಡಿದೆ.