ಕ್ರಿಕೆಟ್ ಬೆಟ್ಟಿಂಗ ಬೆನ್ನು ಬಿದ್ದ ಹುಬ್ಬಳ್ಳಿ ಪೋಲೀಸರು…ಇಬ್ಬರ ಬಂಧನ..
ಹುಬ್ಬಳ್ಳಿ:- ಐಪಿಎಲ್ ಕ್ರಿಕೆಟ್ ಆರಂಭವಾದಾಗಿನಿಂದ ಹುಬ್ಬಳ್ಳಿ ಪೋಲೀಸರು ಬೆಟ್ಟಿಂಗ ಕುಳಗಳ ಬೆನ್ನು ಬಿದ್ದಿದ್ದು ಸಿಸಿಬಿ ಪೋಲೀಸರು ಕ್ರಿಕೆಟ್ ಬೆಟ್ಟಿಂಗ್ ಅಡ್ಡಾದ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದು ಓರ್ವ ಪ್ರಮುಖ ಕ್ರಿಕೆಟ್ ಬುಕ್ಕಿ ಪರಾರಿಯಾಗಿದ್ದಾನೆ.
ಸೋಮವಾರ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ಮದ್ಯೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗನಲ್ಲಿ ತೊಡಗಿದ್ದ ಹುಬ್ಬಳ್ಳಿಯ ಟಿಂಬರ್ ಯಾಡ್೯ ಮೇಲೆ ದಾಳಿ ಮಾಡಿದ ಸಿಸಿಬಿ ಪೋಲೀಸರು ನಾರಾಯಣ ಕಾಟೇಗಾರ್…ಭಾವೇಶ ಪಟೇಲ ಅವರನ್ನು ಬಂಧಿಸಿದ್ದು.ಪ್ರಮುಖ ಬುಕ್ಕಿ ಕಿರಣ ಕಾಟೇಗಾರ ಪರಾರಿಯಾಗಿದ್ದಾನೆ.
ಹುಬ್ಬಳ್ಳಿ ವಿದ್ಯಾನಗರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಮುಖ ಬುಕ್ಕಿಗಾಗಿ ಬಲೆಬೀಸಿದ್ದಾರೆ.