ಸಿಸಿಬಿ ಪೋಲೀಸರಿಂದ ಐಪಿಎಲ್ ಬೆಟ್ಟಿಂಗ್ ಕುಳಗಳಿಗೆ ಶಾಕ್..ಹುಬ್ಬಳ್ಳಿ-ಧಾರವಾಡ ಸೇರಿ ನಾಲ್ಕು ಕಡೆ ಭರ್ಜರಿ ಕಾರ್ಯಾಚರಣೆ..
ಹುಬ್ಬಳ್ಳಿ:-ಹುಬ್ಬಳ್ಳಿ ಸಿಸಿಬಿ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿದ್ದ ಅರ್ಧ ಡಜನ್ ಬುಕ್ಕಿಗಳನ್ನು ಬಂಧಿಸುವಲ್ಲಿ ಯಶಶ್ವಿಯಾಗಿದ್ದಾರೆ.
ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ ಮದ್ಯ ನಡೆಯುತ್ತಿದ್ದ ಪಂದ್ಯದ ಮೇಲೆ ನಡೆಸುತ್ತಿದ್ದ ಹಲವರನ್ನು ಹೆಡಮುರಿ ಕಟ್ಟಿದ್ದಾರೆ.
ಧಾರವಾಡ ವಿದ್ಯಾಗಿರಿ ಪೋಲೀಸ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿಕೊಂಡು ಮೂವರ ಮೇಲೆ ಪ್ರಕರಣ ದಾಖಲಿಸಿದರೆ..ಹುಬ್ಬಳ್ಳಿಯ ಸಬರಬನ್ ಪೋಲೀಸ ಠಾಣೆ..ಕಸಬಾ ಪೊಲೀಸ್ ಠಾಣೆ..ಟೌನ್ ಪೋಲೀಸ ಠಾಣೆಗಳಲ್ಲಿ ಹಲವು ಬುಕ್ಕಿಗಳ ಮೇಲೆ ದೂರು ದಾಖಲಾಗಿದೆ.