ಕೇಂದ್ರ ಸಚಿವರ ವಿರುದ್ದ ತಿರುಗಿ ಬಿದ್ರಾ ಪೊಲೀಸ್ ಇನಸ್ಪೇಕ್ಟರ್ – ರಾಜಕೀಯ ಕೆಸರಾಟಕ್ಕೆ ವೇದಿಕೆಯಾಗುತ್ತಿದೆ ಕಾಡದೇವರ ಕಾದಾಟ.
ಹುಬ್ಬಳ್ಳಿ –
ಧಾರವಾಡದ ಶಹರ ಠಾಣೆ ಪೊಲೀಸ್ ಠಾಣೆ ಇನ್ಸಪೇಕ್ಟರ್ ಕಾಡದೇವರ ಮತ್ತು ಪ್ರಹ್ಲಾದ್ ಜೋಶಿಯವರ ನಡುವಿನ ಗುದ್ದಾಟ ಈಗ ರಾಜಕೀಯ ಕೆಸರಾಟಕ್ಕೆ ವೇದಿಕೆಯಾಗುತ್ತಿದೆ.
ಹೌದು ಸರಕಾರ ಇದ್ದ ಕಡೆ ಬಾಲ ಬಡಿತೀರಿ ನೀವು ಅಂತಾ ಸಚಿವರು ಹೇಳಿದಂಗೆ ಮಾಡ್ತಾ ಇದ್ದಾರಾ ಪೋಲೀಸ ಅಧಿಕಾರಿಗಳು ಎಂಬ ಅನುಮಾನ ಈ ಒಂದು ಘಟನೆಯಿಂದಾಗಿ ಕಂಡು ಬರುತ್ತಿದೆ.ಹೌದು ಎನ್ನುತ್ತಿವೆ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಕೆಲವೊಂದಿಷ್ಟು ಬೆಳವಣಿಗೆಗಳು.
ಕಳೆದ ಮೂರು ದಿನಗಳ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧಾರವಾಡ ಶಹರ ಪೋಲೀಸ ಠಾಣೆಯ ಇನ್ಸ್ಪೆಕ್ಟರ್ ಕಾಡದೇವರಮಠ ಅವರಿಗೆ ವಿನಾಕಾರಣ ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡತಿದ್ದೀರಿ ನೀವು ಎಂದಿದ್ದರು.ನೀವು ಸರಕಾರ ಬಂದ ಕಡೆ ಬಾಲ ಬಡಿತೀರಿ ಇದು ಸರಿ ಅಲ್ಲಾ.ನಮ್ಮ ಕಾರ್ಯಕರ್ತರನ್ನು ಯಾಕೆ ಹೊಡದಿರಿ ಎಂದು ಏರು ಧ್ವನಿಯಲ್ಲಿ ಪುಲ್ ಚಾರ್ಜ್ ಮಾಡಿದ್ದರು.
ಅದಾದ ದಿನವೇ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವರು ಜೋಶಿ ಅವರ ನಡೆ ಖಂಡಿಸಿ ಇಂತಹ ದುರ್ವರ್ತನೆ ಮಾಡುವುದು ಸರಿ ಅಲ್ಲಾ ಅಂತಾ ಹೇಳಿಕೆ ನೀಡಿದ್ದರು.
ಇದೆಲ್ಲದರ ನಡುವೆ ಧಾರವಾಡದಲ್ಲಿ ಜೋಶಿ ಅವರ ದುರ್ವರ್ತನೆ ಖಂಡಿಸಿ ಅಂತಾ ಧಾರವಾಡ ಗ್ರಾಮೀಣ ಕಾಂಗ್ರೆಸ್ ದವರು ಪತ್ರಿಕಾಗೋಷ್ಠಿ ಮಾಡಿದರು.ಕಾಂಗ್ರೇಸ್ ಪಕ್ಷ ಕೇಂದ್ರ ಸಚಿವರ ವಿರುದ್ಧ ನೀಡುತ್ತಿರುವ ಹೇಳಿಕೆಯ ಹಿಂದೆ ಇನ್ಸ್ಪೆಕ್ಟರ್ ಕಾಡದೇವರಮಠ ಕೈವಾಡವಿದೆ ಎನ್ನಲಾಗುತ್ತಿದೆ.
ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಶಾಸಕರ ಸಚಿವರ ಹಾಗೂ ಮುಖಂಡರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡಿರುವ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿವೆ.ಅಲ್ಲದೇ ಅವರ ಬೆಂಬಲಕ್ಕೆ ನಿಲ್ಲುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೂಡಾ ಗುಸು ಗುಸುವಾಗಿ ಕೇಳಿ ಬರುತ್ತಿದ್ದು ಯಾವುದೇ ಸರಕಾರ ಬರಲಿ ಅವರ ಪರ ಡೊಳ್ಳು ಬಾರಿಸುವ ಅಧಿಕಾರಿಗಳಿಗೆ ಕೇಂದ್ರ ಸಚಿವರು ಕೊಟ್ಟ ವಾರ್ನಿಂಗ್ ಮುಂದೆ ಏನೇನಾಗುತ್ತೇ ಎಂಬೊದರ ನಡುವೆ ಇತ್ತ ಕೆಲವರು ಕೂಡಾ ಹೋರಾಟದ ಎಚ್ಚರಿಕೆಯನ್ನು ನೀಡಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಉದಯ ವಾರ್ತೆ ಹುಬ್ಬಳ್ಳಿ