ಅರವಿಂದ ಏಗನಗೌಡ್ರೆ ಮೊದಲು ಇದಕ್ಕೆ ಉತ್ತರಿಸಿ ಆ ಘಟನೆಯನ್ನು ನೀವು ಮರೆತಂತೆ ಕಾಣುತ್ತೆ….. ಬೈಯೊದಕ್ಕೆ ಹೀಗೆ ನೀವು ಮಾತಾಡಿದ್ರೆ 2017 ರಲ್ಲಿ ಘಟನೆ ಬಗ್ಗೆ ಉತ್ತರಿಸಿ ಅವರು ಕೂಡಾ ಒರ್ವ ಸರ್ಕಾರಿ ನೌಕರರೇ…..
ಧಾರವಾಡ –
ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರ ಮೇಲೆ ಧಾರವಾಡ ಉಪನಗರ ಪೊಲೀಸ್ ಇನಸ್ಪೇಕ್ಟರ್ ಎನ್ ಜಿ ಕಾಡದೇವರ ಹಲ್ಲೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.ಈ ಒಂದು ವಿಡಿಯೋ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಇದರ ಬೆನ್ನಲ್ಲೇ ಕೇಂದ್ರ ಸಚಿವರ ನಡೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಹಲವರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದರೊಂದಿಗೆ ಕೇಂದ್ರ ಸಚಿವರ ನಡೆಯನ್ನು ಧಾರವಾಡದಲ್ಲಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಕೂಡಾ ಖಂಡಿಸಿದ್ದಾರೆ.ಅಲ್ಲದೇ ಪೊಲೀಸ್ ಅಧಿಕಾರಿಗೆ ಕ್ಷಮೆ ಕೇಳಬೇಕು ಇಲ್ಲವಾದರೆ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಸರಿ ಇದೆಲ್ಲಾ ಒಂದು ಕಡೆಯಾದರೆ ಇನ್ನೂ ಮತ್ತೊಬ್ಬರನ್ನು ಪ್ರಶ್ನೆ ಮಾಡುವ ಮುನ್ನ ಅರವಿಂದ ಏಗನಗೌಡ್ರೆ ನಿಮ್ಮ ನಾಯಕರು ಮಾಡಿದ ಈ ಹಿಂದಿನ ಕೆಲವೊಂದಿಷ್ಟು ಘಟನೆಗಳನ್ನು ಮರೆತಂತೆ ಕಾಣುತ್ತದೆ.
ಹೌದು ಈ ಹಿಂದೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ವಿನಯ ಕುಲಕರ್ಣಿ ಯವರು ಕಿಮ್ಸ್ ಆಸ್ಪತ್ರೆಯ ವೈಧ್ಯರೊಬ್ಬರ ಹಲ್ಲೆ ಮಾಡಿರುವ ವಿಚಾರ ಜಿಲ್ಲೆಯ ಮತ್ತು ಜನತೆ ಇನ್ನೂ ಕೂಡಾ ಮರೆತಿಲ್ಲ ಸಪ್ಟಂಬರ 06 2017 ರಲ್ಲಿ ಕ್ಷೇತ್ರದಲ್ಲಿನ ಮುಖಂಡರೊಬ್ಬರ ಮಗಳ ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾದ ವಿಚಾರಕ್ಕೆ ಆಕ್ರೋಶಗೊಂಡು ಕಿಮ್ಸ್ ಆಸ್ಪತ್ರೆಗೆ ತೆರಳಿ ವೈಧ್ಯರ ಹೊಟ್ಟೆಗೆ ಗುದ್ದಿ ಕಪಾಳ ಮೋಕ್ಷ ಮಾಡಿದ್ದರು
ವೈಧ್ಯರು ತಪ್ಪು ಮಾಡಿದ್ದರೆ ನಿಮ್ಮ ನಾಯಕರು ಅಂದು ಕಾನೂನಿನಡಿಯಲ್ಲಿ ಶಿಕ್ಷೆಯನ್ನು ಕೊಡಿಸಬಹುದಾಗಿತ್ತು ಆದರೆ ಅವರು ಅಂದು ಮಾಡಿದ್ದೇನು ಬ್ಲಾಕ್ ಅಧ್ಯಕ್ಷರೇ.ನಿಮ್ಮ ಕಾಂಗ್ರೆಸ್ ಶಾಸಕರು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಬಹಿರಂಗವಾಗಿ ವೈದ್ಯರೊಬ್ಬರಿಗೆ ಹೊಟ್ಟೆಗೆ ಗುದ್ದಿ ಕಪಾಳ ಮೋಕ್ಷ ಮಾಡಿದ್ದರಲ್ಲಾ ಅವಾಗ ಏಕೆ ನೀವು ಇದನ್ನು ಪ್ರಶ್ನೆ ಮಾಡಲಿಲ್ಲ ನೀವು ಕೂಡಾ ಆವಾಗ ಬಿಜೆಪಿ ಪಕ್ಷದಲ್ಲಿದ್ದು ಪ್ರಶ್ನೆ ಮಾಡಬಹುದಾಗಿತ್ತು ನಿಮ್ಮ ಧ್ವನಿ ಪ್ರಶ್ನೆಗಳು ಎಲ್ಲಿ ಹೋಗಿದ್ದವು ಆವಾಗ ಇಲ್ಲದ ಈ ಒಂದು ಪ್ರಶ್ನೆ ಈಗ ಯಾಕೆ ನಾಯಕರೇ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ಪ್ರಶ್ನೆಯನ್ನು ಮಾಡ್ತಾ ಇದ್ದಾರೆ.
ಧ್ವನಿ ಎತ್ತಲಿಲ್ಲಾ ಅಂತಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದು ಕೇಂದ್ರ ಸಚಿವರನ್ನು ಪ್ರಶ್ನೆ ಮಾಡುವ ಅರವಿಂದ ಏಗನಗೌಡರೆ ಮೊದಲು ಈ ಒಂದು ಪ್ರಶ್ನೆಗೆ ಉತ್ತರಿಸಿ ಎಂದು ಪ್ರಶ್ನೆ ಮಾಡುತ್ತಿದ್ದು ಉತ್ತರಿಸಿ ನಂತರ ಕೇಂದ್ರ ಸಚಿವರಿಗೆ ಪ್ರಶ್ನೆ ಮಾಡಿ ಎನ್ನುತ್ತಿದ್ದು ಇದಕ್ಕೆ ಅರವಿಂದ ಏಗನಗೌಡರ ಹೇಗೆ ಉತ್ತರಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಉದಯ ವಾರ್ತೆ ಧಾರವಾಡ