ಶಾಟ್೯ ಸರ್ಕಿಟ್ ನಿಂದ ಬಸ್ಸ್ ಗೆ ಬೆಂಕಿ.ಸುಟ್ಟು ಕರಕಲಾದ KSRTC ಬಸ್ಸ್.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪೋರ ಎನ್ ಎಚ್ ಹೈವೆ ರಸ್ತೆ ಮದ್ಯದಲ್ಲಿ ಬಸ್ ಇಂಜಿನ್ ಶಾರ್ಟ್ ಸರ್ಕ್ಯೂಟ್ ದಿಂದ ಬಸ್ ಗೆ ಬೆಂಕಿ ಹತ್ತಿ ಉರಿದ ಘಟನೆ ನಡೆದಿದೆ.
ಚಿಕ್ಕೋಡಿ ಘಟಕ ನಿಪ್ಪಾಣಿ ಯಿಂದ ಬೆಳಗಾವಿ ಯತ್ತ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ರಸ್ತೆ ಮದ್ಯ ಬಸ್ ಇಂಜಿನ್ ನಲ್ಲಿ ಬೆಂಕಿ ಹತ್ತಿದ ತಕ್ಷಣವೇ ಡ್ರೈವ್ ರ ಸಮಯ ಪ್ರಜ್ಞೆ ಯಿಂದ ಜಾಗ್ರತೆ ವಹಿಸಿ ಪ್ರಯಾಣಿಕರನ್ನು ಬಸ್ ದಿಂದ ಕೆಳಗಿಳಿಸಿ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಅದೃಷ್ಟ ವಶ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲಾ. ಪ್ರಯಾಣಿಕರು ಸುರಕ್ಷಿತ ವಾಗಿ ಬೇರೆ ಬಸ್ ಮೂಲಕ ಪ್ರಯಾಣ ಬೆಳೆಸಿದರು.
ಅಗ್ನಿ ಶಾಮಕ ದಳ ಸಿಬ್ಬಂದಿ ಯಿಂದ ಬಸ್ ಬೆಂಕಿ ನಿಂದಿಸಿ ಅಲ್ಲಿ ಆಗುವ ಅವಗಡ ತಪ್ಪಿಸಿದ್ದಾರೆ ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿಕೊಂಡು ಟ್ರಾಫಿಕ್ ನಿಯಂತ್ರಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟ ಘಟನೆ ನಡೆದಿದೆ.
ಉದಯ ವಾರ್ತೆ ಬೆಳಗಾವಿ