ಭತ್ತದ ಹುಲ್ಲು ಒಯ್ಯುತ್ತಿದ್ದ ಲಾರಿಗೆ ಬೆಂಕಿ.ಚಾಲಕನ ಚಾಣಾಕ್ಷತನದಿಂದ ತಪ್ಪಿದ ಅನಾಹುತ..

Share to all

ಭತ್ತದ ಹುಲ್ಲು ಒಯ್ಯುತ್ತಿದ್ದ ಲಾರಿಗೆ ಬೆಂಕಿ.ಚಾಲಕನ ಚಾಣಾಕ್ಷತನದಿಂದ ತಪ್ಪಿದ ಅನಾಹುತ..

ಯಾದಗಿರಿ:-ಸತತ ಬರಗಾಲದಿಂದ ತತ್ತರಿಸಿ ರೈತ ತನಗೆ ಆಹಾರದ ಕೊರತೆ ಆದರೂ ಚಿಂತೆಯಿಲ್ಲ ತಾನು ಸಾಕಿದ ದನ ಕರುಗಳಿಗೆ ಆಹಾರ ಹುಡುಕಿ ತರುವಾಗ ಅದಕ್ಕೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

ಸುರಪುರ ತಾಲೂಕಿನ ಮಂಜಲಾಪೂರ ಗ್ರಾಮದಲ್ಲಿ ಈ ಒಂದು ಘಟನೆ ಜರುಗಿದೆ.ಭತ್ತದ ಹುಲ್ಲು ಹೊತ್ತು ಸಾಗುತ್ತಿದ್ದ ಟ್ರಾಕ್ಟರ್ ಗೆ ವಿದ್ಯುತ್ ತಂತಿ ತಗಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಟ್ರ್ಯಾಕ್ಟರನಲ್ಲಿದ್ದ ಹುಲ್ಲಿಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ಡ್ರ್ಯೆವರ್ ಜಾಗರೂಕತೆಯಿಂದ ಭತ್ತದ ಹುಲ್ಲನ್ನು ಟ್ರ್ಯಾಕ್ಟರನಿಂದ ಹುಲ್ಲನ್ನು ಕೆಳಗೆ ಕಡವಿ ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ.

ಉದಯ ವಾರ್ತೆ ಯಾದಗಿರಿ


Share to all

You May Also Like

More From Author