ಹುಧಾ ಅವಳಿ ನಗರದಲ್ಲಿ ರೌಡಿ ಶೀಟರ್ ಮನೆ ಮೇಲೆ ಏಕಾಏಕಿ ದಾಳಿ.
ಬರೋಬ್ಬರಿ 172 ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ.
ಹುಬ್ಬಳ್ಳಿ:-ಅವಳಿ ನಗರದಲ್ಲಿ ಪೊಲೀಸರಿಂದ ರೌಡೀಶೀಟರ್ ಗಳ ಮನೆ ಮೇಲೆ ಏಕಾಏಕಿ ದಾಳಿ ಮಾಡಿ ರೌಡಿ ಶೀಟರಗಳಿಗೆ ಚಳಿ ಬಿಡಿಸಿದ್ದಾರೆ.
ಹುಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿ,ಧಾರವಾಡ ಉಪವಿಭಾಗದ 172 ರೌಡಿ ಶೀಟರ್ ಗಳ ಮನೆ ಮೇಲೆ ದಾಳಿ ಮಾಡದ ಪೋಲೀಸರು.
ಅಕ್ರಮ ಶಸ್ತ್ರಾಸ್ತ್ರ ಗಳನ್ನ ಪತ್ತೆ ಮಾಡಿದ್ದಾರೆ.
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಷಣ್ಮುಗ ಗುಡಿಹಾಳ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿದ್ದು,172 ಜನರಲ್ಲಿ 5 ಜನರೌಡಿ ಶೀಟರ್ ಗಳ ಮೇಲೆ CRPC ಕಾಯ್ದೆ ಅಡಿ ಮುಂಜಾಗ್ರತಾ ಕ್ರಮ ದಾಖಲು ಮಾಡಿಕೊಂಡಿದ್ದಾರೆ.
ವಿವಿಧ ಪ್ರಕರಣದಲ್ಲಿ ಭಾಗಿಯಗಿ ವಾರೆಂಟ್ ಜಾರಿಯಾದ ಮೂರು ಜನ ರೌಡಿ ಶೀಟರ್ ಗಳನ್ನ ಪೋಲಿಸರು ಪತ್ತೆ ಹಚ್ಚಿ
ಮೂರು ಜನ ರೌಡಿಶೀಟರ್ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟಾರೆ ಹುಧಾ ಅವಳಿ ನಗರದಲ್ಲಿ ರೌಡಿ ಶೀಟರ್ ಗಳ ಮನೆ ಮೇಲೆ ದೊಡ್ಡ ದಾಳಿ ನಡೆಸಿರೋ ಪೊಲೀಸರು. ರೌಡಿಗಳಿಗೆ ಎಚ್ಚರಿಕೆ ಘಂಟೆ ಬಾರಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ