ಹುಬ್ಬಳ್ಳಿ –
ಕಂಕಣ ಸುತ್ತಿ ಮೈಲಾರಕೆ ಬಂದೆ ನಾನು ಹಾಡಿಗೆ ಹೆಜ್ಜೆ ಹಾಕಿದ ಪೊಲೀಸರು – ಬಿಡುವಿಲ್ಲದ ಒತ್ತಡದ ಕೆಲಸದ ನಡುವೆಯೂ ಎಲ್ಲವನ್ನೂ ಮರೆತು ಕುಣಿದು ಕುಪ್ಪಳಿಸಿದ ಪೊಲೀಸ್ ಅಧಿಕಾರಿಗಳೊಂದಿಗೆ ಹೆಜ್ಜೆ ಹಾಕಿದ ಪೊಲೀಸ್ ಸಿಬ್ಬಂದಿಗಳು…..
ಪೊಲೀಸರು ಎಂದರೆ ದಿನದ 24 ಗಂಟೆಗಳ ಕಾಲ ಬಿಡುವಿಲ್ಲದ ಕೆಲಸ ಕಾರ್ಯಗಳು ಇದ್ದೇ ಇರುತ್ತವೆ ಹೀಗಿರುವಾಗ ಇದನ್ನೇಲ್ಲವನ್ನು ಮರೆತು ಹುಬ್ಬಳ್ಳಿಯಲ್ಲಿ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಖತ್ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ.
ಹೌದು ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟಗಳ ಮುಕ್ತಾಯದ ಸಮಾರಂಭದಲ್ಲಿ ಕೊನೆಯದಾಗಿ ಪೊಲೀಸರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.ವಾರ್ಷಿಕ ಕ್ರೀಡಾಕೂಟಗಳ ನೆಪದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಕೊನೆಯಲ್ಲಿ ಪ್ರೇಮ ಅಡ್ಡಾದ ಚಿತ್ರದಲ್ಲಿನ ಹಾಡೊಂದಕ್ಕೆ ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಬಿಡುವಿಲ್ಲದ ಕರ್ತವ್ಯ ಒತ್ತಡದ ಕೆಲಸ ಕಾರ್ಯಗಳನ್ನು ಮರೆತು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಸೇರಿಕೊಂಡು ಹಾಡಿಗೆ ಹೆಜ್ಜೆ ಹಾಕಿದ್ದಾರೆ.ವರ್ಷವಿಡಿ ದಿನ ನಿತ್ಯ ಡ್ಯೂಟಿ,ಬಿಡುವಿಲ್ಲದ ಕಾರ್ಯಗಳ ಮದ್ಯೆ ಎರಡು ದಿನಗಳ ಕಾಲ ನಡೆದ ಪೋಲೀಸ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸ ಎಲ್ಲರೂ ಕೊನೆಯಲ್ಲಿ ಮುಕ್ತಾಯ ಸಮಾರಂಭದಲ್ಲಿ ಈ ಒಂದು ವಿಶೇಷವಾದ ದೃಶ್ಯಗಳು ಕಂಡು ಬಂದವು.
ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕುಣಿದು ಕುಪ್ಪಳಿಸಿ ಕರ್ತವ್ಯದ ನಡುವೆಯೂ ಕೂಡಾ ಎಂಜಾಯ್ ಮಾಡುತ್ತಾ ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶನ ಮಾಡಿ ದರು ಕಂಕಣ ಸುತ್ತಿ ಮೈಲಾರಕೆ ಬಂದೆ ನಾನು ಎಂಬ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಎಸಿಪಿ ಬಲ್ಲಪ್ಪ ನಂಧಗಾವಿ ಸೇರಿದಂತೆ ಹಲವು ಪೋಲೀಸರು ಕುಣಿದು ಕುಪ್ಪಳಿಸಿದ್ದು ಕಂಡು ಬಂದಿತು ಪೊಲೀಸರ ಈ ಒಂದು ಡ್ಯಾನ್ಸ್ ವಿಡಿಯೋಗಳು ನಗರದಲ್ಲಿ ಸಾಕಷ್ಟು ವೈರಲ್ ಆಗಿವೆ.
ಉದಯ ವಾರ್ತೆಗಳು ಹುಬ್ಬಳ್ಳಿ.