ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಸೇವೆ ಪುನರಾರಂಭ.ಕೇಂದ್ರ ಸಚಿವ ಜೋಶಿ.
ಹುಬ್ಬಳ್ಳಿ:-ಹುಬ್ಬಳ್ಳಿ-ಬೆಂಗಳೂರು ಸುಪರ್ ಪಾಸ್ಟ ವಿಶೇಷ ರೈಲು ಸಂಚಾರ ಸೇವೆಯನ್ನು ಇದೇ ತಿಂಗಳು 30 ರಿಂದ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಕಡಿಮೆ ಪ್ರಯಾಣಿಕರ ಕೊರತೆ ಕಾರಣ ರೈಲು ಓಡಾಟ ಸ್ಥಗಿತಗೊಳಿಸಲಾಗಿದೆ ಎಂದು ನೈರುತ್ಯ ರೇಲ್ವೇ ಆಡಳಿತ ತಿಳಿಸಿದ ನಂತರ ಈ ಭಾಗದ ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆ ಬಗ್ಗೆ ಹಾಗೂ ಜನರ ಆಗ್ರಹದ ಕಾರಣದಿಂದ ಸಚಿವ ಜೋಶಿಯವರು ರೇಲ್ವೇ ಶ್ರೀ ಅಶ್ವಿನಿ ವೈಷ್ಣವ ಹಾಗೂ ನೈರುತ್ಯ ರೇಲ್ವೇ ಮಹಾಪ್ರಭಂದಕ ಸಂಜೀವ ಕಿಶೋರ್ ಅವರೊಂದಿಗೆ ಸಚಿವ ಜೋಶಿಯವರು ಮಾತನಾಡಿ ರೈಲು ಆರಂಭದ ಬಗ್ಗೆ ಮನವರಿಕೆ ಮಾಡಿಕೊಟ್ಟು ರೈಲು ಸೇವೆಯನ್ನು ಆರಂಭಿಸುವಂತೆ ಮಾಡಿದ ಮಾತಿನ ಫಲವಾಗಿ ಇದೇ 30 ರಿಂದ ಹುಬ್ಬಳ್ಳಿ-ಬೆಂಗಳೂರು ವಿಶೇಷ ರೈಲು ಆರಂಭವಾಗಲಿದೆ.
ಸಚಿವ ಜೋಶಿಯವರನವರಿಕೆಗೆ ಸ್ಪಂದಿಸಿ ರೈಲು ಆರಂಬಿಸಲು ಒಪ್ಪಿದ ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ರೈಲ್ವೇ ಮಹಾಪ್ರಭಂದಕರಿಗೆ ಸಚಿವ ಜೋಶಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ