ಖಾಲಿ ಸೈಟ್ ಮಾಲಿಕರೆ ಎಚ್ಚರ. ನಿಮ್ಮ ಸೈಟ್ ನಲ್ಲಿ ಮಹಾನಗರ ಪಾಲಿಕೆಯ ಭೋಜಾ ಕುಳಿತುಕೊಳ್ಳಲಿದೆ.

Share to all

ಖಾಲಿ ಸೈಟ್ ಮಾಲಿಕರೆ ಎಚ್ಚರ.
ನಿಮ್ಮ ಸೈಟ್ ನಲ್ಲಿ ಮಹಾನಗರ ಪಾಲಿಕೆಯ ಭೋಜಾ ಕುಳಿತುಕೊಳ್ಳಲಿದೆ.

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡದಲ್ಲಿ ದುಡ್ಡಿದೆ ಎಂದು ಖಾಲಿ ಸೈಟ್ ಖರೀದಿಸಿ ಆ ಕಡೆ ಹೋಗದೇ ಇದ್ದ ಮಾಲಿಕರು ಒಮ್ಮೆ ನಿಮ್ಮ ಸೈಟ್ ಕಡೆ ಹೋಗಿ ಈಗಲೇ ಸೈಟ್ ನ್ನ ಸ್ವಚ್ಛಗೊಳಿಸಿ ಬಿಡಿ.

ಇಲ್ಲದಿದ್ದರೆ ನಮಗೆ ಬರಲಿದೆ ಮಹಾನಗರ ಪಾಲಿಕೆಯಿಂದ ಒಂದು ನೋಟೀಸ್.ನಿಮ್ಮ ಖಾಲಿ ಸೈಟಗಳನ್ನು ಸ್ವಚ್ಛಗೊಳಿಸಿ ಇಲ್ಲದಿದ್ದರೆ ಪಾಲಿಕೆಯಿಂದ ಸ್ವಚ್ಛಗೊಳಿಸಿ ನಿಮ್ಮ ಉತಾರದಲ್ಲಿ ಪಾಲಿಕೆ ಭೋಜಾ ಹಾಕಲಿದೆ ಎಂದು.

ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಈಶ್ವರ ಉಳ್ಳಾಗಡ್ಡಿ ಅವರು ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಸ್ವಚ್ಛತಾ ಸಪ್ತಾಹ ಆರಂಭಿಸಲಿದ್ದು ಅದರ ಭಾಗವಾಗಿ ಖಾಲಿ ಸೈಟಗಳ ಮೇಲೂ ಕಣ್ಣು ಹಾಕಿದ್ದಾರೆ. ಮಹಾನಗರದಲ್ಲಿ ಖಾಲಿ ಸೈಟಗಳು ಕಸ ಕಡ್ಡಿಯಿಂದ ತುಂಬಿ ಹೋಗಿದ್ದಲ್ಲದೇ ಗಿಡಗಂಟೆಗಳು ಬೆಳೆದು ಮಹಾನಗರದ ಅಂದವನ್ನು ಹಾಳುಮಾಡಿವೆ.ಈ ನಿಟ್ಟಿನಲ್ಲಿ ಅಂತಹ ಖಾಲಿ ಸೈಟ್ ಗಳ ಮೇಲೆ ಕಣ್ಣು ಹಾಕಿರುವ ಕಮೀಷನರ್ ಎಲ್ಲ ವಲಯ ಕಛೇರಿಗಳ ಆಯುಕ್ತರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

ಈಗಲೇ ಖಾಲಿ ಸೈಟ್ ನ ಮಾಲಿಕರು ನಿಮ್ಮ ನಿಮ್ಮ ಸೈಟ್ ಗಳನ್ನು ಸ್ವಚ್ಛಗೊಳಿಸಿ ಪಾಲಿಕೆಯಿಂದ ಬರಬಹುದಾದ ನೋಟೀಸ ತಪ್ಪಿಸಿಕೊಳ್ಳಿ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author