ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ – ಹಣ ಇಲ್ಲದೆ ಕೂಡಾ ನಟಿಸಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ನಟಿಯನ್ನು ನೆನೆದ ಕೇಂದ್ರ ಸಚಿವರು
ಹುಬ್ಬಳ್ಳಿ –
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಂತಾಪವನ್ನು ಸೂಚಿಸಿದ್ದಾರೆ.ಹೌದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಹಿರಿಯ ನಟಿ ಲೀಲಾವತಿ ನಿಧನ ಹಿನ್ನೆಲೆಯಲ್ಲಿ ಸಂತಾಪ ಸೂಚಕವನ್ನು ಸೂಚಿಸಿದ್ದಾರೆ.ಲೀಲಾವತಿ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪ ಸೂಚಿಸಿ 86 ವರ್ಷ ವಯಸ್ಸಿನ ನಟಿ ಲೀಲಾವತಿ ಅವರು ನಮ್ಮನ್ನ ಅಗಲಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.ಇನ್ನೂ ಸುದೀರ್ಘ ಅವಧಿಯ ಕಾಲ ಚಿತ್ರ ರಂಗದಲ್ಲಿ ನಟಿಸಿದ್ದಾರೆ ಕೆಲವೊಮ್ಮೆ ಹಣ ಇಲ್ಲದೆ ಕೂಡಾ ನಟಿಸಿ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ.ನಾನು ನಿನ್ನೆ ತಡರಾತ್ರಿ ದೆಹಲಿಯಿಂದ ಬಂದು ಇಲ್ಲಿಗೆ ಬಂದಿದ್ದೇನೆ.ಅವರ ನಿಧನದ ಹಿನ್ನೆಲೆ ಇವತ್ತು ಹಮ್ಮಿಕೊಂಡ ಬೈಕ್ ರ‍್ಯಾಲಿ ರದ್ದು ಮಾಡಿದ್ದೇವೆ.ಈ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದರು.
ಉದಯ ವಾರ್ತೆ ಹುಬ್ಬಳ್ಳಿ