ಕಾಂಗ್ರೆಸ್ ಸರಕಾರವನ್ನ ಸಿಸಿ ರೋಡ್ ಗೆ ಹೋಲಿಸಿದ ಜೋಶಿ.ಕಾಂಪಿಟೇಶನ್ ಇನ್ ಕರಪ್ಸೆನ್ ಸರಕಾರ ಎಂದ ಕೇಂದ್ರ ಸಚಿವ.
ಹುಬ್ಬಳ್ಳಿ:- ಈ ಕಾಂಗ್ರೆಸ್ ಸರಕಾರ ಒಂದ ರೀತಿ ಸಿಸಿ ರೋಡ್ ಇದ್ದಂಗೆ.ಸಿಸಿ ರೋಡ್ ಹೇಗೆ ಮಾಡ್ತಾರೋ ಹಾಗೆ ಸರಕಾರ..ಅಂದರೆ ಕಾಂಪಿಟೇಶನ್ ಇನ್ ಕರಪ್ಸನ್ ಸರಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲಾ ಒಳ ಜಗಳಗಳೇ ಜಾಸ್ತಿ ಆಗಿವೆ.ಇದರಿಂದ ಆಡಳಿತದ ಮೇಲೆ ಪರಿಣಾಮ ಆಗಿದೆ.ಮೋದಿ ಅಕ್ಕಿ ಬಿಟ್ಟು ಒಂದ ಕಾಳ ಅಕ್ಕಿ ಕೊಟ್ಟಿಲ್ಲಾ ಇವರು.ಅದನ್ನೇ ಅನ್ನಭಾಗ್ಯ ಎಂದಿದ್ದಾರೆ.
ಹರಿಪ್ರಸಾದ ನಿನ್ನೆ ಎಲ್ಲಾ ಮಾತಾಡಿ ಕೊನೆಗೆ ಬಿಜೆಪಿ ಬೈದಿದ್ದಾರೆ.ಹರಿಪ್ರಸಾದ ವಿರುದ್ಧ ಯಾರ ಮಸಲತ್ತು ಮಾಡ್ತಿದ್ದಾರೋ ಅವರ ವಿರುದ್ಧ ಮಾತಾಡೋ ಶಕ್ತಿ ಹರಿಪ್ರಸಾದಗಿಲ್ಲಾ.ಹರಿಪ್ರಸಾದ ಅವರನ್ನ ಈಡಿಗ ಸಮುದಾಯ ಗುರುತಿಸಿದೆ.ಅದರ ವಿರುದ್ಧ ಸಿದ್ದರಾಮಯ್ಯ ಸಮಾವೇಶ ಮಾಡತಿದ್ದಾರೆ.ಅದೇ ಹರಿಪ್ರಸಾದ ಸಿದ್ದರಾಮಯ್ಯ ಚಡ್ಡಿಹಾಕಿದ್ದಾರೆ ಎಂದು ಹೇಳಿದ್ದಾರೆ.ಹರಿಪ್ರಸಾದ ಚಡ್ಡಿ ಹಾಕಿದ್ದಾರೋ ಇಲ್ವೋ ಗೊತ್ತಿಲ್ಲಾ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ