*ವಿಶೇಷ ಚೇತನರ ಬದುಕು, ಬವಣೆ ಹಾಗೂ ಸಾಧನೆ ಕಂಡು ಭಾವುಕರಾದ ಸಚಿವ ಸಂತೋಷ್ ಲಾಡ್*
*ಧಾರವಾಡದ ಸುತ್ತೂರಿನ ಶ್ರವಣದೋಷ ವಿದ್ಯಾರ್ಥಿಗಳ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಭಾಗಿ*
ಧಾರವಾಡ, ಅಕ್ಟೋಬರ್ 01 :
ಧಾರವಾಡದ ಸುತ್ತೂರು ಬಳಿ ಶ್ರವಣ ದೋಷ ವಿದ್ಯಾರ್ಥಿಗಳ ತರಬೇತಿ ಕೇಂದ್ರದ ಉದ್ಘಾಟನೆಗೆ ಆಗಮಿಸಿದ್ದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ರವರು, ಕಾರ್ಯಕ್ರಮದ ಬಳಿಕ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರವಣ ದೋಷದಿಂದ ಬಳಲುತ್ತಿರುವ ಮಕ್ಕಳ, ವಿದ್ಯಾರ್ಥಿಗಳ ಹಾಗೂ ವಯಸ್ಕರ ಬದುಕಿನ ಕುರಿತಾಗಿ ನಿರ್ದೇಶಿಸಿದ್ದ ಸಾಕ್ಷ್ಯ ಚಿತ್ರ ವೀಕ್ಷಿಸಿ ಭಾವುಕರಾದರು.
ಅಷ್ಟೇ ಅಲ್ಲದೆ ಇವರ ಸಾಧನೆ ಸಮಾಜಕ್ಕೆ ಮಾದರಿ, ದೈಹಿಕ ನೂನ್ಯತೆ ಹೊಂದಿದ್ದರೂ ಮಾನಸಿಕವಾಗಿ ಸದೃಢರಾಗಿ, ಯಾರ ಹಂಗೂ ಇಲ್ಲದೇ ತಮ್ಮ ಸ್ವತ್ವದಿಂದ ಜೀವನ ನಡೆಸುತ್ತಿರುವುದು ನಿಜಕ್ಕೂ ಅದ್ಭುತ ಎಂದು ಸಚಿವರು ಶ್ಲಾಘಿಸಿದರು.
ಉದಯ ವಾರ್ತೆ ಹುಬ್ಬಳ್ಳಿ