ಕಟ್ಟಡ ನಕ್ಷೆ..ಶೇ 15 ಉಲ್ಲಂಘನೆಯಾಗಿದ್ದರೂ ಸಕ್ರಮ..ನಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ.
ಬೆಂಗಳೂರು:-ಇನ್ಮುಂದೆ ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಜನರು ಶೇ 15 ರಷ್ಟು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದರೂ ಸಹ ಸಕ್ರಮ ಮಾಡಿಕೊಳ್ಳಬಹುದು.ಹಾಗಂತ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.
1976 ರ ಕೆಎಂಸಿ ಆ್ಯಕ್ಟಗೆ ತಿದ್ದುಪಡೆ ತಂದಿರುವ ನಗರಾಭಿವೃದ್ಧಿ ಇಲಾಖೆ,ಕೆಎಂಸಿ 1976 ಉಪಪ್ರಕರಣ 1ರ ಸೆಕ್ಷನ್ 428 ಹಾಗೂ ಕೆಎಂಸಿ 1964 ರ ಉಪ ಪ್ರಕರಣ 1ರ ಸೆಕ್ಷನ್ 325 ಕ್ಕೆ ತಿದ್ದುಪಡೆ ತರಲಾಗಿದ್ದು,ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಮಾಡಲ್ ಬಿಲ್ಡಿಂಗ್ ಬೈಲಾ 2025 ಅನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.ಈ ಬಗೆಗಿನ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನ ಅವಕಾಶ ನೀಡಲಾಗಿದೆ.
