ಅನ್ನಭಾಗ್ಯ ಅಕ್ಕಿ ರೇಡ್,ಕಳ್ಳ ಪೋಲೀಸರ ಆಟ.ತಿಮಿಂಗಲು ಬಿಟ್ಟು ಮೀನ ಹಿಡಿದ ಸಿಸಿಬಿ ಪೋಲೀಸರು.

Share to all

ಅನ್ನಭಾಗ್ಯ ಅಕ್ಕಿ ರೇಡ್,ಕಳ್ಳ ಪೋಲೀಸರ ಆಟ.ತಿಮಿಂಗಲು ಬಿಟ್ಟು ಮೀನ ಹಿಡಿದ ಸಿಸಿಬಿ ಪೋಲೀಸರು……,…..

ಹುಬ್ಬಳ್ಳಿ:- ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ರಾಜಾರೋಷವಾಗಿಯೇ ನಡೆಯುತ್ತಿದೆ.ಆದರೆ ನಿನ್ನೆ ಸಿಸಿಬಿ ಪೋಲೀಸರು ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಸಂಗ್ರಹಿಸಿಟ್ಟಿದ್ದ ಒಂದು ಸಣ್ಣ ಅಕ್ಕಿ ರೇಡ್ ಮಾಡಿದರು.ಅದು ಸರಿನೇ.ಅದೇ ಎಪಿಎಂಸಿಯಲ್ಲಿ ನೀವು ರೇಡ್ ಮಾಡಿದ ಕೂಗಳತೆಯಲ್ಲಿ ಇನ್ನೂ ಮೂರು ಆಕ್ರಮ ಪಡಿತರ ಅಕ್ಕಿ ಸಂಗ್ರಹದ ಗೋಡೌನ ಇದ್ದರೂ ಅವು ಪೋಲೀಸರ ಕಣ್ಣಿಗೆ ಯಾಕೆ ಬಿದ್ದಿಲ್ಲಾ ಅನ್ನೋದು ಸಾರ್ವಜನಿಕರ ಪ್ರಶ್ನೆ.

ಇನ್ನೂ ಪಡಿತರ ಅಕ್ಕಿ‌ದಂಧೆಯ ಕಿಂಗ್ ಪಿನ್ ಯಾರು ಅಂತಾ ಕೇಳಿದರೆ ಸಣ್ಣ ಹುಡುಗರು ಹೇಳತಾರೆ.ಇಡೀ ಉತ್ತರ-ಕರ್ನಾಟಕದಿಂದ ಸಣ್ಣ ಪುಟ್ಟ ಪಡಿತರ ಖರೀದಿದಾರರು ಲೋಡ್ ಗಟ್ಟಲೆ ಅಕ್ಕಿ ಹುಬ್ಬಳ್ಳಿ ಕಿಂಗ್ ಪಿನ್ ಗೊಡೌನಗೆ ಬರುತ್ತವೆ ಅನ್ನೋದು ಜಗಜ್ಜಾಹೀರ.

ಈ ಹಿಂದೆ ಕತ್ತಲು ಹರಿದು ಬೆಳಗಾಗುವುದರೊಳಗಾಗಿ ಹುಬ್ಬಳ್ಳಿ ಗಬ್ಬೂರ ಬೈ ಪಾಸ್ ಗೆ ಬಂದು ಖಾಲಿ ಮಾಡಿ ಹೋಗತಿದ್ದ ಗಾಡಿಗಳು ಈಗ ಹಗಲಿನಲ್ಲಿಯೇ ಪಡಿತರ ಅಕ್ಕಿಯನ್ನ ಆ ಗೋಡೌನಗೆ ಬಂದು ಖಾಲಿ ಮಾಡಿ ಹೋಗತವೆ.ಆ ಗೋಡೌನಲ್ಲಿ ಏನಿಲ್ಲಾ ಅಂದರೂ ಕೋಟಿಗಟ್ಟಲೆ ಅಕ್ರಮ ಅಕ್ಕಿ ದಾಸ್ತಾನಾಗಿರುತ್ತದೆ.ಈ ವಿಷಯ ಆ ನಾಲ್ಕು ಪೋಲೀಸ ಠಾಣೆಯ ಎಲ್ಲರಿಗೂ ಗೊತ್ತು.ಆದರೂ ಅವರೆಲ್ಲಾ ಸುಮ್ಮನಿರಲು ಕಾರಣ ಹೇಳಬೇಕಿಲ್ಲಾ.

ಹಗಲು ರಾತ್ರಿ ಎನ್ನದೇ ಅಕ್ರಮ ಪಡಿತರ ಅಕ್ಕಿ ಗಾಡಿಗಳು ಹುಬ್ಬಳ್ಳಿಗೆ ಬರುತ್ತಿದ್ದರೂ ಪೋಲೀಸರು ನಿನ್ನೆ ಒಂದೇ ಒಂದು ರೇಡ್ ಮಾಡಿದ್ದರ ಹಿಂದಿನ ಅಸಲಿಯತ್ತೇ ಬೇರೆ ಎನ್ನಲಾಗುತ್ತಿದೆ.

ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರು ಅಕ್ರಮ ಅಕ್ಕಿ ಖರೀದಿ ಮಾಡಿ ಎಲ್ಲರೂ ಆ ಕಿಂಗ್ ಪಿನ್ ಗೆ ಕೊಡಬೇಕು. ಇಲ್ಲದಿದ್ದರೆ ರೇಡ್ ಖಂಡಿತ.ನಿನ್ನೆ ರೇಡ್ ಮಾಡಿದರಲ್ಲ ಆ ವ್ಯಕ್ತಿ ತಾನು ಖರೀಸಿದ ಅಕ್ಕಿಯನ್ನ ಕಿಂಗ್ ಪಿನ್ ಗೆ ಕೊಡದೇ ನೇರವಾಗಿ ಮಹಾರಾಷ್ಟ್ರಕ್ಕೆ ಕಳಿಸತಿದ್ದನಂತೆ.ಅದಕ್ಕೆ ಅವನ ಗೋಡೌನ ರೇಡ್ ಆಗಿದ್ದಂತೆ ಹೌದೋ ಅಲ್ಲವೋ ಗೊತ್ತಿಲ್ಲಾ.ಹುಬ್ಬಳ್ಳಿಯಲ್ಲಿ ಆ ಕಿಂಗ್ ಪಿನ್ ಕೆಲ ಪೋಲೀಸ ಅಧಿಕಾರಿಗಳನ್ನ ಬುಟ್ಟಿಗೆ ಹಾಕಿಕೊಂಡು ಅಕ್ರಮ ದಂಧೆಯ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ.

ಖಡಕ್ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎಂದೇ ಹೆಸರು ಮಾಡಿರುವ ರೇಣುಕಾ ಮೇಡಂ ಆ ಕಿಂಗ್ ಪಿನ್ ಅಕ್ಕಿ ದಂಧೆಯ ಸಾಮ್ರಾಜ್ಯವನ್ನ ಕಟ್ಟಿಹಾಕ್ತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author