ಎಲೆ ತಟ್ಟುತ್ತಿದ್ದವರ ಬೆನ್ನು ತಟ್ಟಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು – ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತ್ರತ್ವದಲ್ಲಿ ಪಿಎಸ್ಐ ಆಲಮೇಲಕರ್ ಮತ್ತು ಟೀಮ್ ಕಾರ್ಯಾಚರಣೆ

Share to all

ಎಲೆ ತಟ್ಟುತ್ತಿದ್ದವರ ಬೆನ್ನು ತಟ್ಟಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು – ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತ್ರತ್ವದಲ್ಲಿ ಪಿಎಸ್ಐ ಆಲಮೇಲಕರ್ ಮತ್ತು ಟೀಮ್ ಕಾರ್ಯಾಚರಣೆ

ಹುಬ್ಬಳ್ಳಿ –

ಇಸ್ಪೇಟ್ ಆಟವಾಡುತ್ತಿದ್ದ ಜೂಜು ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹುಬ್ಬಳ್ಳಿ ತಾಲ್ಲೂಕಿನ ಮಾವನೂರು ಗ್ರಾಮದಲ್ಲಿ ಬಿಂದಾಸ್ ಆಗಿ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ.ಎಸ್ಪಿ ಮತ್ತು ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತ್ರತ್ವದಲ್ಲಿ ಪಿಎಸ್ಐ ಆಲಮೇಲಕರ ಮತ್ತು ಟೀಮ್ ಈ ಒಂದು ದಾಳಿಯನ್ನು ಮಾಡಿದೆ.ಎಲೆ ತಟ್ಟುತ್ತಿದ್ದ 6 ಜನರನ್ನು ಪೊಲೀಸರು ಬಂಧನ ಮಾಡಿದ್ದು 27800 ರೂಪಾಯಿ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಕಳೆದ ಹಲವು ದಿನಗಳಿಂದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಇನ್ಸ್ಪೇಕ್ಟರ್ ಮುರುಗೇಶ ಚೆನ್ನಣ್ಣವರ ಮತ್ತು ಪಿಎಸ್ಐ ಆಲಮೇಲಕರ ಮತ್ತು ಸಿಬ್ಬಂದಿಗಳು ನಿರಂತರವಾಗಿ ಜೂಜು ಅಡ್ಡೆಗಳ ಮೇಲೆ ದಾಳಿಯನ್ನು ಮಾಡುತ್ತಿದ್ದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದು ಈ ಒಂದು ನಿಟ್ಟಿನಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಳಿಗಳು ನಿರಂತರವಾಗಿ ನಡೆಯುತ್ತಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author