ಕೆರೆಗೆ ಬಿದ್ದು ನವವಿವಾಹಿತೆ ಸಾವು.ರಕ್ಷಿತಾಳ ಸಾವಿನ ಹಿಂದೆ ಸಂಶಯದ ಹುತ್ತ..

Share to all

ಕೆರೆಗೆ ಬಿದ್ದು ನವವಿವಾಹಿತೆ ಸಾವು.ರಕ್ಷಿತಾಳ ಸಾವಿನ ಹಿಂದೆ ಸಂಶಯದ ಹುತ್ತ..

ತುಮಕೂರು:-ಮದುವೆ ಆಗಿ ಇನ್ನೂ ಇಪ್ಪತ್ತು ದಿನಗಳು ಕಳೆದಿಲ್ಲಾ ಅದೇನಾಯ್ತೋ ಏನು ನವವಿವಾಹಿತೆ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಕುಣಿಗಲ್ ತಾಲೂಕಿನ ಶಿಡ್ಲನಹಟ್ಟಿ ಗ್ರಾಮದಲ್ಲಿ ಜರುಗಿದೆ.

ಕಳೆದ ಇಪ್ಪತ್ತು ದಿನಗಳ ಹಿಂದೆ ಸೋದರ ಮಾವನೊಂದಿಗೆ ರಕ್ಷಿತಾ ವಯಸ್ಸು ಇನ್ನೂ ಕೇವಲ (19) ಮನೆಯವರೆಲ್ಲಾ ಸೇರಿ ಅದ್ದೂರಿಯಾಗಿ ಮದುವೆ ಮಾಡಿದ್ದರು. ಮದುವೆ ಮುಗಿದು ಇನ್ನೂ ಗಂಡನ ಮನೆಗೆ ಹೋಗಿರಲಿಲ್ಲಾ ಅಷ್ಟರಲ್ಲೇ ಸಾವನ್ನಪ್ಪಿದ್ದಾಳೆ.ರಕ್ಷಿತಾಳ ಸಾವಿಗೆ ಅವಳ ಆರೋಗ್ಯದ ಕಾರಣದಿಂದ ಕಿನ್ನತೆಗೆ ಒಳಗಾಗಿದ್ದಳು ಎಂದು ಸಂಭಂದಿಕರು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ ಅಮ್ರತೂರು ಪೋಲೀಸ ಠಾಣೆಯ ಪೋಲೀಸರು ತನಿಖೆ ನಡೆಸಿದ್ದಾರೆ.

ಉದಯ ವಾರ್ತೆ ತುಮಕೂರು.


Share to all

You May Also Like

More From Author