ಜೋಶಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಸರ್ವೇ : ರಜತ್ ಹೆಸರು ಮುನ್ನಲೆಗೆ.
ಹುಬ್ಬಳ್ಳಿ : ಕೇಂದ್ರ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹಾಗೆ ಮುಂದುವರೆದಂತಿದೆ. ಈಗಾಗಲೇ 20 ಜನ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಹಾಕಿದ್ದಾರೆ ಆದ್ರೆ ಅದರಲ್ಲಿ ಇಬ್ಬರು ನಾಯಕರ ಹೆಸರು ಮಾತ್ರ ಈಗ ಸೆಮಿ ಫೈನಲ್ ಹಂತಕ್ಕೆ ತಲುಪಿದ್ದು ಇಬ್ಬರಲ್ಲಿ ಟಿಕೆಟ್ ಭಾಗ್ಯ ಯಾರಿಗೆ ಬರಲಿದೆ ಎಂದು ಕುತೂಹಲ ಮೂಡಿಸಿದೆ
ಹೌದು ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಹಾಗೂ ಅರ್ಜಿ ಸಲ್ಲಿಸದ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಹಂತಕ್ಕೆ ಇದೀಗ ಕಾಂಗ್ರೆಸ್ ನಾಯಕರು ಬಂದಿದ್ದು . ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಯಾರ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎನ್ನುವ ಕುರಿತು ಟೆಲಿ ಕಾಲಿಂಗ್ ಮೂಲಕ ಸರ್ವೇ ನಡೆಸುತ್ತಿದ್ದಾರೆ
ಅಲ್ಲದೆ ಜೊತೆ ಜೊತೆಗೆ ಮಾಜಿ ಜಗದೀಶ್ ಶೆಟ್ಟರ್ ಹೆಸರನ್ನು ಕಾಂಗ್ರೆಸ್ ತಂಡ ಅಧಿಕೃತವಾಗಿ ಕೈ ಬಿಟ್ಟಿದ್ದು,ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟದಲ್ಲಿ ಇದೀಗ ಇಬ್ಬರಲ್ಲಿ ಒಬ್ಬರು ಆಯ್ಕೆ ಎನ್ನುವ ಹಂತಕ್ಕೆ ಬಂದು ನಿಂತಿದೆ. ಇನ್ನು ಸದ್ಯದ ಮಾಹಿತಿ ಪ್ರಕಾರ ಪಕ್ಷದ ಕಾರ್ಯಕರ್ತರು ಹಾಗೂ ಸ್ವತಃ ವಿನಯ್ ಕುಲಕರ್ಣಿ ರಜತ್ ಉಳ್ಳಾಗಡ್ಡಿ ಮಠ ಅವರಿಗೆ ಬೆಂಬಲ ನೀಡುತ್ತಿದ್ದು ಇವರಿಗೆ ಟಿಕೆಟ್ ಫೈನಲ್ ಎನ್ನುವ ಮಾತು ಕೇಳಿ ಬರುತ್ತಿದೆ.
ಉದಯ ವಾರ್ತೆ ಹುಬ್ಬಳ್ಳಿ.