ತುಂಡುಡುಗೆ ಡ್ರೇಸ್ ಹಾಕ್ತಾಳೆಂದು ಪತ್ನಿಯನ್ನು ಕೊಲೆ ಮಾಡಿದ ಜೀವನ್. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಹತ್ಯೆ ಮಾಡಿ ಎಸ್ಕೇಫ್. ಬಂಧನಕ್ಕೆ ಜಾಲ ಬೀಸಿದ ಪೊಲೀಸರು
ಹಾಸನ –
ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.ಹೌದು ಪತ್ನಿಯು ಯಾವಾಗಲೂ ತುಂಡುಡುಗೆ ಧರಿಸುತ್ತಾಳೆ ಎಂದು ಆಕ್ರೋಶಗೊಂಡ ಮಹಾಶಯ ಪತ್ನಿಯನ್ನು ಬರ್ಬರವಾಗಿ ಕತ್ತುಸೀಳಿ ಹತ್ಯೆ ಮಾಡಿದ್ದಾನೆ.ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಧಾರವಾಡ ಮೂಲದ ಪತ್ನಿ ಜ್ಯೋತಿ ಹತ್ಯೆಯಾದ ಮಹಿಳೆಯಾಗಿದ್ದಾಳೆ.ಪತಿ ಜೀವನ್ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಕತ್ತು ಕೊಯ್ದು ಪರಾರಿಯಾಗಿದ್ದಾನೆ.
ಇನ್ನೂ ಸುದ್ದಿಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.ಹಾಸನದ ಜೀವನ್ ಹಾಗೂ ಧಾರವಾಡದ ಜ್ಯೋತಿ ಅವರು ಪ್ರೀತಿಸಿ ಮದುವೆಯಾಗಿದ್ದರು.ಒಂದು ವರ್ಷದ ಹಿಂದಷ್ಟೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಜ್ಯೋತಿ ಅವರು ಮಾಡರ್ನ್ ಉಡುಪುಗಳನ್ನು ಧರಿಸುವುದು ಜೀವನ್‌ಗೆ ಇಷ್ಟವಿರಲಿಲ್ಲ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆಯೂ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು.
ನಿನ್ನೆ ಮತ್ತೆ ಜ್ಯೋತಿ ತುಂಡುಡುಗೆ ಧರಿಸಿ ಹೊರಗೆ ಹೋಗುತ್ತಿದ್ದರು.ಇದರಿಂದ ಕುಪಿತಗೊಂಡ ಜೀವನ್ ಈ ರೀತಿ ಬಟ್ಟೆ ಧರಿಸಿ ಹೊರಗೆ ಹೋಗಬೇಡ ಎಂದು ಗದರಿದ್ದಾರೆ.ಆದರೂ ಜ್ಯೋತಿಯು ಅದೇ ಬಟ್ಟೆಯಲ್ಲಿ ತೆರಳಲು ಮುಂದಾಗಿದ್ದಾರೆ.ಆಗ ಕೋಪದಲ್ಲಿದ್ದ ಜೀವನ್ ಸರಿ ನಾನೇ ನಿನ್ನನ್ನು ಬಿಟ್ಟು ಬರುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ.ರಾಂಪುರ ಬಳಿಯ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಉದಯ ವಾರ್ತೆ ಹಾಸನ