ನಾಳೆ ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ.ಪ್ರತಿಭಟನೆಗೆ ಆರ್ ಅಶೋಕ ಎಂಟ್ರಿ.
ಹುಬ್ಬಳ್ಳಿ’-ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದವರ ಬಂಧನ ಖಂಡಿಸಿ, ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಆರ್ ಅಶೋಕ ಭಾಗಿಯಾಗಲಿದ್ದಾರೆ.
1992 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದ ಸಮಯದಲ್ಲಿ ಗಲಭೆಗಳು ನಡೆದಿದ್ದವು.ಆ ಗಲಭೆಯಲ್ಲಿಯ ಆರೋಪಿಗಳಲ್ಲಿ ಒಬ್ಬರಾದ ಶ್ರೀಕಾಂತ ಪೂಜಾರಿ ಅವರನ್ನು ಕಳೆದ ಶುಕ್ರವಾರ ಹುಬ್ಬಳ್ಳಿ ಪೋಲೀಸರು ಬಂಧನ ಮಾಡಿದ್ದಾರೆ.ಆ ಹಿನ್ನೆಲೆಯಲ್ಲಿ ನಾಳೆ ಆರ್ ಅಶೋಕ ನೇತ್ರತ್ವದಲ್ಲಿ ಪೋಲೀಸರ ನಡೆ ಖಂಡಿಸಿ ಶಹರ ಪೋಲೀಸ ಠಾಣೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ