ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಅಸಿಸ್ಟಂಟ್ ಹೆಲ್ತ ಇನಸ್ಪೆಕ್ಟರ್ ಗಳ ಅಂಧಾ ದರ್ಭಾರ.ಹೋದಲ್ಲೆಲ್ಲಾ ಕುಣಿಯುತಿದೆ ಕುರುಡು ಕಾಂಚಾಣ.

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಹಾಗೂ ಅಸಿಸ್ಟಂಟ್ ಹೆಲ್ತ ಇನಸ್ಪೆಕ್ಟರ್ ಗಳ ಅಂಧಾ ದರ್ಭಾರ.ಹೋದಲ್ಲೆಲ್ಲಾ ಕುಣಿಯುತಿದೆ ಕುರುಡು ಕಾಂಚಾಣ.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಂದರೆ ಬೆಂಗಳೂರ ಬಿಟ್ಟು ಎರಡನೇ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಇದೆ.ಇಂತಹ ಮಹಾನಗರ ಪಾಲಿಕೆ ಅಂದರೆ ಸಮುದ್ರ ಇದ್ದಂಗೆ.ತೊಳೆದಷ್ಟು ರಾಡಿ ಎದ್ದೇ ಏಳುತ್ತಿದೆ.ಈಗ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಗಳ ಸರದಿ ವಲಯ ಕಛೇರಿಯಲ್ಲಿಯ ಜನಸಂಖ್ಯೆ ಆಧರಿಸಿ ಆರೋಗ್ಯ ನಿರೀಕ್ಷಕರು ಇರುತ್ತಾರೆ.ಅವರ ಕೆಲಸ ಪ್ರತಿ ದಿನ ಬೆಳಗಿನಿಂದ ವಾಡ್೯ ಸ್ವಚ್ಛತೆಯ ಉಸ್ತುವಾರಿ ಮತ್ತು ನಗರ ಸ್ವಚ್ಛವಾಗಿರಲು ಅವರ ಪಾತ್ರ ಬಹಳ ಮುಖ್ಯ.

ಆದರೆ ಪಾಲಿಕೆ ಕೆಲವು ಆರೋಗ್ಯ ನಿರೀಕ್ಷಕರು ಮತ್ತು ಸಹಾಯಕ ಆರೋಗ್ಯ ನಿರೀಕ್ಷಕರು ತಮ್ಮ ಕೆಲಸ ಬಿಟ್ಟು ವಸೂಲಿಗಿಳಿದಿದ್ದಾರೆ.ಅದು ಡಿಜಿಟೆಲ್ ವಸೂಲಿ ದಂಧೆ ಆರಂಭವಾಗಿದೆ.ಇದೇನು ಹುಬ್ಬಳ್ಳಿ-ಧಾರವಾಡದಲ್ಲಿ ಹೊಸದೇನಲ್ಲಾ.ಸರಕಾರದಿಂದ ಪಗಾರ ತೊಗೊಂಡೂ ಈ ವಸೂಲಿ ದಂಧೆಗಿಳಿದಿರುವ ಇನ್ಸ್ಪೆಕ್ಟರ್ ಗಳಿಗೆ ಏನೆನ್ನಬೇಕು ಗೊತ್ತಿಲ್ಲಾ.

ಆರೋಗ್ಯ ನಿರೀಕ್ಷಕರ ಹೈಟೆಕ್ ವಸೂಲಿ ದಂಧೆಯ ಸಂಪೂರ್ಣ ಚಿತ್ರಣವನ್ನ ದಾಖಲೆ ಸಮೇತ ಉದಯ ವಾರ್ತೆ ಬಿಚ್ಚಿಡಲಿದೆ.ದಿನದ ಇಪ್ಪತ್ತನಾಲ್ಕು ಘಂಟೆಯಲ್ಲಿ ಹನ್ನೆರಡು ಘಂಟೆ ಕೆಲಸ ಮಾಡುವ ಆಯುಕ್ತರು ಈ ವಸೂಲಿಕೋರ ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಅಸಿಸ್ಟಂಟ್ ಹೆಲ್ತ್ ಇನ್ಸ್ಪೆಕ್ಟರ್ ಗಳ ಹೆಡಮುರಿ ಕಟ್ಟಬೇಕಿದೆ.ಹೆಲ್ತ್ ಇನ್ಸ್ಪೆಕ್ಟರ್ ಗಳ ವಸೂಲಿ ದಂಧೆಯ ಒಬ್ಬೊಬ್ಬರ ಡಿಜಿಟೆಲ್ ವಸೂಲಿ ಕಹಾನಿಯನ್ನ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author