ಬಂಧಿತ ಶ್ರೀಕಾಂತ ಪೂಜಾರಿ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದ ಪೋಲೀಸರು.ಆರೋಪಿತನು ಜಾಮೀನ ಪಡೆದರೆ ನ್ಯಾಯಾಲಯಕ್ಕೆ ಬಲವಾದ ಕಾರಣ ನೀಡಿದ ಪೋಲೀಸರು.
ಹುಬ್ಬಳ್ಳಿ:-ಕಳೆದ ಡಿಸೆಂಬರ 24 ರಂದು ಬಂಧಿತನಾಗಿರುವ ಶ್ರೀಕಾಂತ ಪೂಜಾರಿ ಬಂಧನವಾಗಿದ್ದು ಅವರ ಜಾಮೀನು ಅರ್ಜಿಗೆ ನಿನ್ನೆ 5 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಇಂದು ನ್ಯಾಯಾಲಯ ಎರಡು ಕಡೆ ವಾದ ಆಲಿಸಿ ನಾಳೆ ಜಾಮೀನು ಅರ್ಜಿಯ ಮೇಲೆ ಆದೇಶಕ್ಕೆ ಮುಂದೂಡಿದೆ.
ಇದರ ಮದ್ಯೆ ಹುಬ್ಬಳ್ಳಿ ನಗರ ಪೋಲೀಸ ಠಾಣೆಯ ಪೋಲೀಸರು ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ತಕರಾರು ಅರ್ಜಿ ಸಲ್ಲಿಸಿದೆ.ತಕರಾರು ಅರ್ಜಿಯಲ್ಲಿ ಆರೋಪಿಯ ಮೇಲೆ 13 ಕ್ರಿಮಿನಲ್ ಪ್ರಕರಣಗಳಿದ್ದು ನ್ಯಾಯಾಲಯಕ್ಕೆ ಹಾಜರಾಗುವುದಿಲ್ಲಾ ಅಂತಾ ಬಲವಾದ ಕಾರಣಗಳನ್ನು ನ್ಯಾಯಾಲಯಕ್ಕೆ ನೀಡಿ ಜಾಮೀನು ನೀಡಬಾರದೆಂದು ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ.